ನಮ್ಮ ಸರ್ಕಾರದಿಂದ ದೇವಸ್ಥಾನ ರಕ್ಷಣೆಗೆ ಆದ್ಯತೆ : ಸಂಸದ ಬಿ. ವೈ ರಾಘವೇಂದ್ರ

ಭದ್ರಾವತಿ : ಭದ್ರಾವತಿಯ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನವು ಕಾಲ ಕ್ರಮೇಣ ಶಿತಲಗೊಳ್ಳುತ್ತಿದ್ದು, ಇದನ್ನು ಸರಿಪಡಿಸಿ ಜೀರ್ಣೋದ್ಧಾರ ಗೊಳಿಸುವ ನಿಟ್ಟಿನಲ್ಲಿ
ಸಂಸದರಾದ ಬಿ. ವೈ ರಾಘವೇಂದ್ರ ಅವರ ವಿಶೇಷ ಪ್ರಯತ್ನದಿಂದ ದೇವಸ್ಥಾನ ಅಭಿವೃದ್ಧಿ ಮತ್ತು ಇತರ ಕಾಮಗಾರಿಗೆ ಕೇಂದ್ರದ ಪುರಾತತ್ವ ಇಲಾಖೆಯಿಂದ ಸುಮಾರು 4 ಕೋಟಿ ಅನುದಾನವನ್ನು ಮನವಿ ಮಾಡಿದ್ದಾರೆ.

ಇಂದು ಸಂಸದರಾದ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದು, ದೇವಾಲಯದ ಅಭಿವೃದ್ಧಿ ಸಮಿತಿಯೊಂದಿಗೆ, ಸಾರ್ವಜನಿಕರೊಂದಿಗೆ ಮಳೆಯಿಂದ ರಕ್ಷಿಸಲು ಮಾಡಬೇಕಾಗದ ಕೆಲಸಗಳ ಬಗ್ಗೆ ಚರ್ಚಿಸಿದರು. ” ನಮ್ಮ ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ಗತವೈಭವವನ್ನು ಸಾರುವಂತೆ ದೇವಸ್ಥಾನ ಅಭಿವೃದ್ಧಿಯನ್ನು ಮಾಡಿದ್ದಾರೆ, ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ನವರು ಕೂಡ ಮಠ ಮಂದಿರದ ಜೀರ್ಣೋದ್ಧಾರಕ್ಕಾಗಿ ಅನುದಾನ ನೀಡಿದ್ದಾರೆ, ನಮ್ಮ ಭದ್ರಾವತಿಯ ನರಸಿಂಹ ದೇವಸ್ಥಾನ,ಕೆಳದಿಯ ಅರಸ ಶ್ರೀ ಶಿವಪ್ಪ ನಾಯಕರ ಬಿದನೂರು ಕೋಟೆ,ಬಳ್ಳಿಗಾವಿಯ ಆಂಜನೇಯ ದೇವಸ್ಥಾನ ಹಾಗೂ ಗರುಡಗಂಬದ ರಕ್ಷಣೆಗಾಗಿ ವಿಶೇಷ ಅನುದಾನದ ಹಂತದಲ್ಲಿದೆ,ನಮ್ಮ ಸರ್ಕಾರದಿಂದ ದೇವಸ್ಥಾನ ರಕ್ಷಣೆಗೆ ಸದಾ ಬೆಂಬಲವಿರುತ್ತದೆ “

— ಬಿ ವೈ ರಾಘವೇಂದ್ರಸಂಸದರು. ಶಿವಮೊಗ್ಗ ಲೋಕಸಭಾ ಕ್ಷೇತ್ರ ,ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿ ಶೇಜೇಶ್ವರ್,ಮುಖಂಡರಾದ ಎಸ್ ದತ್ತಾತ್ರಿ, ಮಂಗೋಟೆ ರುದ್ರೇಶ್, ಕುಮಾರ್, ಆನಂದ್, ತಹಶೀಲ್ದಾರ್ ಪ್ರದೀಪ್, ಎಇಇ ದಯಾನಂದ್, ದೇವಸ್ಥಾನ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಮಹಿಳಾ ಮೋರ್ಚಾದ ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.