ಬಹರೈನ್‍ ಸಂಗೀತ ಗಾನ ಸಂಭ್ರಮ-2022

ಅಮ್ಮ ಕಲಾವಿದರು ಬಹರೈನ್ ಅರ್ಪಿಸುವ ಸಂಗೀತ ಗಾನ ಸಂಭ್ರಮ 22 ಕಾರ್ಯಕ್ರಮದ ಮುಹೂರ್ತ ಪೂಜೆ ಹಾಗೂ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಆಗಸ್ಟ್ 19ರಂದು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಗಣ್ಯ ಅತಿಥಿಗಳ ಸಮಕ್ಷಮದಲ್ಲಿ ನೆರವೇರಿತು. ಅಮ್ಮ ಕಲಾವಿದರು ಸಂಘಟನೆಯ ಮುಖ್ಯಸ್ಥರಾದ ಮೋಹನದಾಸ್ ರೈ ಎರುಂಬು ಸಾರಥ್ಯದಲ್ಲಿ ನಡೆಯಲಿರುವ ಈ ಸಂಗೀತ ಕಾರ್ಯಕ್ರಮದಲ್ಲಿ ತಾಯ್ನಾಡಿಂದ ಖ್ಯಾತ ಗಾಯಕ ತುಳುನಾಡ ಗಾನಗಂಧರ್ವ ಜಗದೀಶ ಆಚಾರ್ಯ ಪುತ್ತೂರು ಮತ್ತು ಅವರ ಬಳಗದ ಯುವ ಪ್ರತಿಭೆಗಳಾದ ದಿವ್ಯನಿಧಿ ರೈ, ದಿವ್ಯಧನುಷ್ ರೈ, ಸಮನ್ವಿ ರೈ ಪುತ್ತೂರು, ಆರ್‍ಜೆ ಪ್ರಸನ್ನ ಮಂಗಳೂರು, ವಾಮನ್ ಬೈಲೂರು, ಶಿಜಿಮೋನು ಸಿ.ಬಿ.ಕ್ಯಾಲಿಕಟ್ ಇವರು ಭಾಗವಹಿಸಲಿದ್ದು ತಾ.25-11-2022 ರ ಶುಕ್ರವಾರದಂದು ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನೆರವೇರಲಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಹಿರಿಯ ಕನ್ನಡಿಗ ಅಮರನಾಥ್ ರೈ, ನಾಗೇಶ್ ಶೆಟ್ಟಿ ಕರ್ಮಾರ್,ಇಂಡಿಯನ್ ಕ್ಲಬ್ ಮಾಜಿ ಅಧ್ಯಕ್ಷರಾದ ಆನಂದ ಲೋಬೋ,ಮಾಜಿ ಅಧ್ಯಕ್ಷರಾದ ರಾಜ್ ಕುಮಾರ್, ಆಸ್ಟಿನ್ ಸಂತೋಷ್, ಬಂಟ್ಸ್ ಬಹರೈನ್ ಅಧ್ಯಕ್ಷರಾದ ಅರುಣ್ ಶೆಟ್ಟಿ, ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕದ ಅಧ್ಯಕ್ಷರಾದ ರಾಜೇಶ್ ಬಿ.ಶೆಟ್ಟಿ, ವಿಶ್ವಕರ್ಮ ಬಳಗ ಬಹರೈನ್ ಅಧ್ಯಕ್ಷ ಸತೀಶ್ ಉಳ್ಳಾಲ್, ಪ್ರವೀಣ್ ಶೆಟ್ಟಿ ಮೊದಲಾದವರು ಶುಭಹಾರೈಸಿದರು ಹಾಗೂ ಪ್ರಮುಖರಾದ ಆರ್.ಆರ್. ಟ್ರೇಡರ್ಸ್ ನ ಮಾಲೀಕರಾದ ರೋಯ್ ಸ್ಟನ್ ದಂಪತಿಗಳು, ಗೌತಮ್ ಶೆಟ್ಟಿ ಸೌದಿ ಅರೇಬಿಯಾ, ಉಮ್ಮರ್ ಸಾಹೇಬ್, ಸುರೇಂದ್ರ ಉದ್ಯಾವರ, ಅನಿಲ್ ದೇರಾಜೆ, ಪುರುಷೋತ್ತಮ ಪೂಜಾರಿ, ಯಕ್ಷಿತ್ ಶೆಟ್ಟಿ ಮತ್ತು ಅಮ್ಮ ಕಲಾವಿದರು ಬಹರೈನ್ ಇದರ ಕಾರ್ಯಕಾರಿ ಮುಖ್ಯರಾದ ಸಂತೋಷ್ ನಾಯಕ್ ಅಜೆಕಾರ್, ಪ್ರಸಾದ್ ಶೆಟ್ಟಿ ಮಜ್ಜಾರ್ ಉಪಸ್ಥಿತರಿದ್ದರು.
ರಾಮ್ ಪ್ರಸಾದ್ ಅಮ್ಮೆನಡ್ಕ ಮುಹೂರ್ತಪೂಜೆಯನ್ನು ನೆರವೇರಿಸಿದರು. ಮೋಹನದಾಸ್ ರೈ ಎರುಂಬು ನೆರೆದವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಅರ್ಚನಾ ಸಂದೀಪ್ ಶೆಟ್ಟಿ ವಂದಿಸಿದರು.

Related Posts

Leave a Reply

Your email address will not be published.