ಬಂಟ್ಸ್ ಬಹರೈನ್ ಪದಗ್ರಹಣಾ ಕಾರ್ಯಕ್ರಮ : ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿ

ಬಹರೈನ್; “ತಾನು ಕರಗಿ ಇತರರರಿಗೆ ಬೆಳಕು ಕೊಡುವ ಮೇಣದ ಬತ್ತಿಯಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಸಾರ್ಥಕೆಯನ್ನು ಕಾಣಬಹುದು . ಮಕ್ಕಳಿಗೆ ಮಾತೃ ಭಾಷೆಯನ್ನೂ ಕಳಿಸಿದಾಗ ಮಾತ್ರ ನಮ್ಮ ಸಂಸ್ಕ್ರತಿ ಉಳಿದು ಬೆಳೆಯಲು ಸಾಧ್ಯ . ನಾವು ಆರ್ಥಿಕವಾಗಿ ಬೆಳೆದಂತೆಲ್ಲಾ ಸಮಾಜವನ್ನೂ ಬೆಳೆಸಬೇಕು “ಎಂದು ಇಲ್ಲಿ ಇತ್ತೀಚಿಗೆ ಜರುಗಿದ ಬಂಟ್ಸ್ ಬಹರೈನ್ ನ ನೂತನ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ ಸಮಾರಂಭದಲ್ಲಿ ಬಂಟ್ಸ್ ಬಹರೈನ್ ನ ನೂತನ ಅಧ್ಯಕ್ಷರಾದ ಸೌಕೂರು ಅರುಣ್ ಶೆಟ್ಟಿ ಯವರು ಹೇಳಿದರು.

ತನ್ನ 20ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಇಲ್ಲಿನ ಅನಿವಾಸಿ ಬಂಟ ಸಮುದಾಯದ ಒಕ್ಕೂಟವಾದ “ಬಂಟ್ಸ್ ಬಹರೈನ್ ” ಸ್ಥಳೀಯ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಕನ್ನಡ ಚಲನಚಿತ್ರರಂಗದ ಅತ್ಯಂತಹ ಪ್ರತಿಭಾವಂತ ನಟ ,ನಿರ್ದೇಶಕ ,ನಿರ್ಮಾಪಕ ,ಕಾಂತಾರ ಚಿತ್ರದ ಮೂಲಕ ದೇಶ ,ವಿದೇಶಗಳಲ್ಲಿ ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ಆಯಾಮ ನೀಡಿರುವ ರಿಷಬ್ ಶೆಟ್, ಕೊಲ್ಲಿಯ ಖ್ಯಾತ ಉದ್ಯಮಿ,ಸಮಾಜ ಸೇವಕ,ಫಾರ್ಚ್ಯೂನ್ ಸಮೂಹ ಹೋಟೆಲ್ ಸಂಸ್ಥೆಯ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಹಾಗು ಕೆ .ಎಸ್ .ಹೆಗ್ಡೆ ವೈದ್ಯಕೀಯ ಅಕಾಡೆಮಿಯಳ್ಳಿ ವಿಧಿವಿಜ್ಞಾನ ಔಷಧ ಮತ್ತು ವಿಷಶಾಸ್ತ್ರ ವಿಭಾಗದ ಮುಖ್ಯಸ್ಥರೂ ಹಾಗು ಉಪನ್ಯಾಯಸಕರೂ ಆಗಿರುವ ಖ್ಯಾತ ವೈದ್ಯರಾದ ಮಹಾಬಲೇಶ್ ಶೆಟ್ಟಿಯವರು ಕೂಡ ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು. “ಕಾಂತರ” ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಬಿಡುವಿಲ್ಲದೆ ಕಾರ್ಯನಿರತರಾಗಿದ್ದರೂ ಕೂಡ ತಾನು ಸಮಾರಂಭಕ್ಕೆ ಬರುವುದಾಗಿ ಸುಮಾರು ನಾಲ್ಕು ತಿಂಗಳ ಹಿಂದೆಯೇ ಒಪ್ಪಿಕೊಂಡಿದ್ದರಿಂದ ಕೊಟ್ಟ ಭಾಷೆಗೆ ತಪ್ಪದೆ ಸಮಾರಂಭಕ್ಕೆ ಆಗಮಿಸಿ ತಮ್ಮ ನಯ ,ವಿನಯ,ಸರಳತೆಯಿಂದ ಎಲ್ಲರೊಂದಿಗೆ ಬೆರೆತು ಎಲ್ಲರ ಮನಸ್ಸನ್ನು ಗೆದ್ದು ಅಪಾರ ಪ್ರಶಂಸೆಗೆ ಪಾತ್ರರಾದರು. ಅತಿಥಿಗಳನ್ನು ಪೂರ್ಣ ಕುಂಭ ಸ್ವಾಗತದ ಮೂಲಕ ಸಭಾಂಗಣಕ್ಕೆ ಬರಮಾಡಿಕೊಂಡ ನಂತರ ಶ್ರೀಮತಿ ಪ್ರತಿಮಾ ಅರುಣ್ ಶೆಟ್ಟಿ ಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಬವಾಯಿತು. ಅತಿಥಿಗಳು ಒಂದಾಗಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಇದೇ ಸಂಧರ್ಭದಲ್ಲಿ ನಟ ,ನಿರ್ದೇಶಕ ರಿಷಬ್ ಶೆಟ್, ಕೊಲ್ಲಿಯ ಖ್ಯಾತ ಉದ್ಯಮಿ,ಸಮಾಜ ಸೇವಕ ,ಫಾರ್ಚ್ಯೂನ್ ಸಮೂಹ ಹೋಟೆಲ್ ಸಂಸ್ಥೆಯ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಹಾಗು ಕೆ .ಎಸ್ .ಹೆಗ್ಡೆ ವೈದ್ಯಕೀಯ ಅಕಾಡೆಮಿಯಳ್ಳಿ ವಿಧಿವಿಜ್ಞಾನ ಔಷಧ ಮತ್ತು ವಿಷಶಾಸ್ತ್ರ ವಿಭಾಗದ ಮುಖ್ಯಸ್ಥರೂ ಹಾಗು ಉಪನ್ಯಾಯಸಕರೂ ಆಗಿರುವ ಖ್ಯಾತ ವೈದ್ಯರಾದ ಮಹಾಬಲೇಶ್ ಶೆಟ್ಟಿಯವರನ್ನು ಬಂಟ ಸಮುದಾಯದ ಪ್ರೀತಿ,ವಿಶ್ವಾಸ ,ಅಭಿಮಾನದ ದ್ಯೋತಕವಾಗಿ ಪೇಟ ಧಾರಣೆ ಮಾಡಿ ,ಹಾರ ಹಾಕಿ ,ಶಾಲು ಹೊದಿಸಿ , ಫಲಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು . ಸಮ್ಮಾನಕ್ಕೆ ಉತ್ತರಿಸುತ್ತಾ ಮಾತನಾಡಿದ ಮೂವರು ಸಾಧಕರು ಬಂಟ್ಸ್ ಬಹರೈನ್ ಸಂಘಟನೆಗೆ ಕೃತಜ್ಞತೆ ಸಲ್ಲಿಸಿ ಶುಭ ಹಾರೈಸಿದರು . ಬಂಟ್ಸ್ ಬಹರೈನ್ ನ ಪ್ರತಿಭಾವಂತ ಕಲಾವಿದರುಗಳಿಂದ ಹಾಡು ಹಾಗು ನ್ರತ್ಯಗಳ ಪ್ರದರ್ಶನ ವೇದಿಕೆಯಲ್ಲಿ ಮೂಡಿಬಂದು ನೆರೆದವರ ಮನಸೂರೆಗೊಂಡಿತು . ಬಂಟ್ಸ್ ಬಹರೈನ್ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳಿಗೂ ಮುಖ್ಯ ಅತಿಥಿಗಳಾದಂಥ ಶ್ರೀ ರಿಷಬ್ ಶೆಟ್ಟಿ ಯವರು ನಾಮಫಲಕವನ್ನು ಲಗತ್ತಿಸುವ ಮೂಲಕ ನೂತನ ಆಡಳಿತ ಮಂಡಳಿಗೆ ವಿದ್ಯುಕ್ತ ಪದಗ್ರಹಣ ಮಾಡಿದರು . ಪ್ರಧಾನ ಕಾರ್ಯದರ್ಶಿಗಳಾದಂಥ ಶ್ರೀ ರೋಹನ್ ಶೆಟ್ಟಿ ಯವರು ಧನ್ಯವಾದ ಸಮರ್ಪಿಸಿದರೆ ,ಕುಮಾರಿ ಸಮೀಕ್ಷಾ ಶೆಟ್ಟಿ,ಯಕ್ಷಿತ್ ರೈ ,ಸುಧೀರ್ ಶೆಟ್ಟಿ ಹಾಗು ಅಜಿತ್ ಶೆಟ್ಟಿ ಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು .

Related Posts

Leave a Reply

Your email address will not be published.