ಬೈಂದೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಅಷ್ಠಬಂಧ ಬ್ರಹ್ಮಕಲಶಾಭಿಷೇಕ

ಇತಿಹಾಸ ಪ್ರಸಿದ್ಧ ಬೈಂದೂರು ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಶ್ರೀದೇವಿಯ ಸಾನಿಧ್ಯದಲ್ಲಿಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಶ್ರೀಮನ್ಮಹಾ ರಥೋತ್ಸವವು ವಿಜೃಂಭಣೆಯಿಂದ ನಡೆಯಿತುತಂತ್ರಿಗಳಾದ ಮಂಜುನಾಥ ಅಡಿಗ ಹಾಗೂ ಪ್ರಧಾನ ಅರ್ಚಕರಾದ ಪ್ರಕಾಶ್ ಐತಾಳ್ ಇವರ ನೇತೃತ್ವದಲ್ಲಿ ಪ್ರತಿದಿನ ತಂತ್ರಿಗಳಾದ ಧಾರ್ಮಿಕ ವಿಧಿ ವಿಧಾನಗಳು ದೇವಿಯ ಸಾನಿಧ್ಯದಲ್ಲಿ ಸಂಪನ್ನಗೊಂಡಿದೆ.

ಅಷ್ಟಬಂದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಬಿ.ಎಸ್ .ಸುರೇಶ್ ಶೆಟ್ಟಿ.ಮಾತನಾಡಿ ಸುಮಾರು 25 ವರ್ಷಗಳ ನಂತರ ಜೀವಮಾನದಲ್ಲಿ ಒದಗಿ ಬಂದಿರುವ ಈ ಅಪೂರ್ವ ಸಂದರ್ಭದಲ್ಲಿ ಶ್ರೀ ದೇವಿಯ ಸೇವೆಗೆ ತಮ್ಮನ್ನು ತೊಡಗಿಸಿಕೊಂಡು ದೇವಿಯ ಕೃಪೆಗೆ ಪಾತ್ರರಾಗುವ ಸದಾವಕಾಶ ಲಭಿಸಿದೆ.ಶ್ರೀ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಶ್ರೀಮನ್ಮಹಾ ರಥೋತ್ಸವದ ಪ್ರಯುಕ್ತ ಜರುಗಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಸಕುಟುಂಬ ಸಮೇತರಾಗಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗಿದ್ದೀರಿ ಹೇಳಿದರು.ರಥೋತ್ಸವ ಪ್ರಯುಕ್ತ ಸಾವಿರಾರು ಭಕ್ತಾದಿಗಳು ಬಂದು ಶ್ರೀ ದೇವರ ದರ್ಶನ ಪಡೆದು ಪುನೀತರಾದರು..ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಬಿ ವೈ ರಾಘವೇಂದ್ರ ಸಂಸದರು, ಅಷ್ಟಬಂದ ಬ್ರಹ್ಮಕಲಶೋತ್ಸವ ಸಮಿತಿ , ಶಾಸಕರಾದ ಬಿ ಎಂ ಸುಕುಮಾರ್ ಶೆಟ್ಟಿ ಗೌರವಾಧ್ಯಕ್ಷರು ಅಷ್ಟಬಂದ ಬ್ರಹ್ಮಕಲಶೋತ್ಸವ ಸಮಿತಿ, ಭೀಮಪ್ಪ ಹೆಚ್ ಬಿಲ್ಲಾರ್ ಕಾರ್ಯನಿರ್ವಣಾಧಿಕಾರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ, ಶ್ರೀಕಾಂತ್ ಎಸ್ ಹೆಗ್ಡೆ ತಹಶೀಲ್ದಾರ್/ಆಡಳಿತಾಧಿಕಾರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ ಮತ್ತ ಅಷ್ಟಬಂದ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ,ದೇವಸ್ಥಾನದ ಸಿಬ್ಬಂದಿ ವರ್ಗ ಊರ ಹಾಗೂ ಪರ ಊರ ಸಮಸ್ತ ಭಕ್ತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.