ಬೈಂದೂರು ತಾಲೂಕಿಗೆ ಸರ್ಕಾರಿ ಆಸ್ಪತ್ರೆ ಮಂಜೂರಿಗೆ ಕಾರ್ಡ್ ಚಳುವಳಿ

ಬೈಂದೂರು ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆ ಮಂಜೂರಿಗಾಗಿ ಆಗ್ರಹಿಸಿ ಕಾರ್ಡ್ ಚಲೋ ಚಳುವಳಿಯನ್ನು ಆರಂಭಿಸಿದ್ದಾರೆ. ವಕೀಲರಾದ ಧನಂಜಯ ಶೆಟ್ಟಿ ಶಿರೂರು ಮತ್ತು ಬೈಂದೂರು ನಾಗರಿಕ ಸೇವಾ ವೇದಿಕೆಯ ಅಧ್ಯಕ್ಷರಾದ ಅಶ್ವಥ್ ನಾರಾಯಣ ಅವರು ಶೀಘ್ರದಲ್ಲೇ ಆಸ್ಪತ್ರೆ ಮಂಜೂರುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಬೈಂದೂರು ತಾಲೂಕು ಕೇಂದ್ರದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯಲ್ಲಿ ಚುನಾವಣೆ ಮೊದಲೇ ಮಂಜೂರು ಮಾಡಬೇಕು ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಮುಖ್ಯಮಂತ್ರಿಗೆ ಮನವಿ ಮೂಲಕ ವಿನಂತಿಸಲಾಗಿದೆ. ಬೈಂದೂರು ತಾಲೂಕು ಕೇಂದ್ರದಲ್ಲಿ ಒಂದು ಸರಿಯಾದ ಆಸ್ಪತ್ರೆ ಇಲ್ಲ. ದೂರದ ಕುಂದಾಪುರ, ಉಡುಪಿ, ಮಣಿಪಾಲ್‍ಗೆ ಹೋಗಲು ಕನಿಷ್ಟ ಒಂದೂವರೆ ಗಂಟೆ ಆದರೂ ಬೇಕು. ಆದರೆ ಗಂಭೀರ ಸ್ವರೂಪದ ಪ್ರಕರಣದಲ್ಲಿ ಬಡ ಕುಟುಂಬದ ರೋಗಿಗೆ ದೂರದ ಖಾಸಗಿ ಆಶ್ಪತ್ರೆಗೆ ಹೋಗಲು ಹಣದ ಅವಶ್ಯಕತೆ ಬೇಕು. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಇಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡಲು ಆಗಿಲ್ಲ. ಶೀಘ್ರದಲ್ಲಿ ಬೈಂದೂರಿನಲ್ಲಿ ತಾಲೂಕು ಆಸ್ಪತ್ರೆ ಮಂಜೂರುಗೊಳಿಸವಂತೆ ಆಗ್ರಹಿಸಿ ಕಾರ್ಡ್ ಚಳುವಳಿಯ ಮೂಲಕ ವಿನಂತಿಸಿಕೊಂಡಿದ್ದಾರೆ.
