ಬೈಂದೂರು ಲಾವಣ್ಯ (ರಿ) ಇದರ 46ನೇ ವಾರ್ಷಿಕೋತ್ಸವ

ಬೈಂದೂರು ಇಲ್ಲಿನ ಲಾವಣ್ಯ ರಿ ಇದರ 46ನೇ ವಾರ್ಷಿಕೋತ್ಸವ ಅಂಗವಾಗಿ ರಂಗ ಪಂಚಮಿ 2023 ನಾಟಕೋತ್ಸವ ಹಾಗೂ ಯಕ್ಷಗಾನ ಉದ್ಘಾಟನಾ ಸಮಾರಂಭ ಬೈಂದೂರು ಶಾರದಾ ವೇದಿಕೆ ಸೋಮವಾರ ಸಂಜೆ ನಡೆಯಿತು. ಬೈಂದೂರು ಯು.ಬಿ.ಎಸ್ ಶೈಕ್ಷಣಿಕ ಶಿಕ್ಷಣ ಸಮೂಹ ಸಂಸ್ಥೆಯ ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ನಂದಗೋಕುಲ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಅವರು ಶುಭಾಶಂಸನೆಗೈದರು ಲಾವಣ್ಯ ರಿ ಬೈಂದೂರು ಅಧ್ಯಕ್ಷ ಬಿ. ನರಸಿಂಹ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಲಾವಣ್ಯ ರಿ ಬೈಂದೂರು ಇದರ ಸ್ಥಾಪಕಾಧ್ಯಕ್ಷ ಹಾಗೂ 70ರ ಸಂಭ್ರಮಾಚರಣೆ ಆಚರಿಸಿಕೊಳ್ಳುತ್ತೀರುವ ಯು ಶ್ರೀನಿವಾಸ ಪ್ರಭು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬೈಂದೂರು ಮಾಜಿ ಶಾಸಕ ಕೆ ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ರಾಜು ಪೂಜಾರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಾವಣ್ಯ ಸದಸ್ಯರಾದ ನಾಗರಾಜ್ ಪಿ ಯಡ್ತರೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಜಿ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಶಿರೂರು ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಹರೆಗೋಡು ವಿಶ್ವನಾಥ್ ಆಚಾರ್ ವರದಿ ವಾಚಿಸಿದರು. ದಯಾನಂದ ಪಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಲಾವಣ್ಯ ರಿ ಬೈಂದೂರು ಇವರ ನಾಯಿ ಕಳೆದಿದೆ ನಾಟಕ ಪ್ರದರ್ಶನ ನಡೆಯಿತು.
