ಬಡ ದಂಪತಿಗಳಿಗೆ ಮನೆ ನಿರ್ಮಿಸಿಕೊಟ್ಟ ಆಶ್ರಯದಾತ ಡಾ. ಗೋವಿಂದ ಬಾಬು ಪೂಜಾರಿ
ಬೈಂದೂರು :ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ )ಉಪ್ಪುಂದ ಶೈಕ್ಷಣಿಕ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ ಟ್ರಸ್ಟ್ ಮೂಲಕ ತೀರಾ ಅಗತ್ಯ ಉಳ್ಳವರಿಗೆ ಹಾಗೂ ಕಡು ಬಡವರಿಗೆ ಸೂರು(ಮನೆ) ನಿರ್ಮಿಸಿ ಕೊಡುವ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬಂದಿರುತ್ತದೆ
. ಬೈಂದೂರು ಗಂಗಾನಾಡು ನಿರೋಡಿ ರಾಮ ಮರಾಠ ದಂಪತಿಗಳಿಗೆ ಸುಸಜ್ಜಿತ ಮನೆಯನ್ನು ಶ್ರೀ ಡಾ ಗೋವಿಂದ ಬಾಬು ಪೂಜಾರಿಯವರು ನಿರ್ಮಿಸಿ ಫಲಾನುಭವಿಗಳಿಗೆ ಮನೆಯ ಕೀಯನ್ನು ಹಸ್ತಾಂತರಿಸಿದರು. ವರಲಕ್ಷ್ಮಿ ನಿಲಯದ ಗೃಹಪ್ರವೇಶೋತ್ಸವ ಇಂದು ನವರಾತ್ರಿಯ ದಿನದಂದು ವಿಜೃಂಭಣೆಯಿಂದ ನೆರವೇರಿದ್ದು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನಿರ್ಮಿಸಿ ಕೊಡುತ್ತಿರುವ 9ನೇ ಮನೆ ಇದಾಗಿದೆ.
ಈ ಶುಭಮುಹೂರ್ತದಲ್ಲಿ ಡಾ. ಗೋವಿಂದ ಬಾಬು ಪೂಜಾರಿ ದಂಪತಿ ಯವರಿಗೆ ಮರಾಠ ಸಮಾಜ ಹಾಗೂ ಛತ್ರಪತಿ ಸಂಘಟನೆಯವರು ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಮಠಾಧಿಪತಿಗಳು ನಿಪ್ಪಾಣಿ ಬೆಳಗಾವ್, ಉಪಸ್ಥಿತರಿದ್ದು ಮನೆಯ ದಂಪತಿಗಳಿಗೆ ಹಾಗೂ ಉಪಸ್ಥಿತರಿರುವ ಎಲ್ಲರಿಗೂ ಆಶೀರ್ವಚನ ಮಾಡಿ ಶುಭ ಹಾರೈಸಿದರು,ಖSS ಹಿರಿಯರಾದ ಅಚ್ಚುತ್ ಕಲ್ಮಾಡಿ ಹಾಗೂ ಇನ್ನಿತರ ಗಣ್ಯರು ಗಂಗಾ ನಾಡು ಸುತ್ತಮುತ್ತಲಿನ ಸಾರ್ವಜನಿಕರು ಉಪಸ್ಥಿತರಿದ್ದರು.