ಬೈಂದೂರು ಶ್ರೀ ಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಶರನ್ನವರಾತ್ರಿ ಉತ್ಸವ
ಬೈಂದೂರು ತಾಲೂಕಿನ ಸುಪ್ರಸಿದ್ಧ ದೇವಸ್ಥಾನ ಶ್ರೀ ಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಇಂದು ವಿಜಯ ದಶಮಿ ಪ್ರಯುಕ್ತ ಮಂಜುನಾಥ್ ಅಡಿಗ ಬಡಾಕೆರೆ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನದ ಮೂಲಕ ಇಂದು ದೇವಿಯ ಸನ್ನಿಧಾನದಲ್ಲಿ ದುರ್ಗಾ ಹೋಮ ವಿಶೇಷ ಮಹಾಪೂಜೆ ಅನ್ನದಾನ ಸೇವೆ ಸಂಪನ್ನಗೊಂಡಿದೆ.
ಸಂಜೆ 6:00 ರಿಂದ 8.30 ರವರೆಗೆ ಶ್ರೀ ರಾಮ ಭಜನಾ ಮಂಡಳಿ ಬಡಾಕೆರೆ ಇವರಿಂದ ಭಜನಾ ಕಾರ್ಯಕ್ರಮವು ಅದ್ದೂರಿನಿಂದ ನಡೆದಿದೆ.
ಈ ಸಂದರ್ಭದಲ್ಲಿ ಸಂತೋಷ್ ಮೊಗವೀರ ದೇವಸ್ಥಾನ ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರಾದ ಕೇಶವ ಸುವರ್ಣ ಜಯಲಕ್ಷ್ಮಿ ಮೊಗವೀರ ರತ್ನ, ಅಶ್ವಿನಿ, ಆಡಳಿತ ಸರ್ವ ಸದಸ್ಯರು ಊರ ಪರ ಊರ ಭಕ್ತಾ ಅಭಿಮಾನಿಗಳು ಉಪಸ್ಥಿತರಿದ್ದರು.