ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಸಂಸ್ಥೆಯ 50ನೇ ಮಾಸಿಕ ಯೋಜನೆ ಸುವರ್ಣ ಸೇವಾ ಸಂಭ್ರಮ
ವಿಶ್ವ ಹಿಂದೂ ಪರಿಷತ್ -ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಜೈ, ಶ್ರೀ ರಾಮ್ ಶಾಖೆ ಎಡಪದವು ಇದರ ಆಶ್ರಯದಲ್ಲಿ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಸಂಸ್ಥೆಯ 50ನೇ ಮಾಸಿಕ ಯೋಜನೆಯ ಅಂಗವಾಗಿ 10 ಅಶಕ್ತ ಕುಟುಂಬಗಳಿಗೆ ಸಹಾಯಹಸ್ತ ನೀಡುವ ವೇದಿಕೆ ಸುವರ್ಣ ಸೇವಾ ಸಂಭ್ರಮ. ಸಭಾ ಕಾರ್ಯಕ್ರಮ ಹಾಗೂ ಸೇವಾ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ಡಿಸೆಂಬರ್ 18ರಂದು ಎಡಪದವಿನ ಶ್ರೀರಾಮ ಮಂದಿರದ ಪಟ್ಟಾಭಿರಾಮ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರು ಕಾರ್ಯದರ್ಶಿ ಸಂಚಾಲಕರು ಹಾಗೂ ಸರ್ವ ಸದಸ್ಯರು ಸರ್ವರಿಗೂ ಸ್ವಾಗತ ಕೋರಿದ್ದಾರೆ.