ಬಂಟ್ವಾಳ : ತೇಜಾ ಹ್ಯಾಂಡೀ ಪ್ಯಾಸೆಂಜರ್ ಮತ್ತು ತೇಜಾ ಹ್ಯಾಂಡೀ ಕಾರ್ಗೋ ಬಿಡುಗಡೆ

ಬಂಟ್ವಾಳ ತಾಲೂಕಿನ ಮೆಲ್ಕಾರಿನಲ್ಲಿ ಸುಮಾರು 7 ವರ್ಷಗಳಿಂದ ಗ್ರಾಹಕರ ಸ್ನೇಹಿಯಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ವಸ್ತಿಲ್ ಆಟೋ ಮಾರ್ಟ್ ಸಂಸ್ಥೆಯಲ್ಲಿ ಇಂದು ತೇಜಾ ಹ್ಯಾಂಡೀ ಪ್ಯಾಸೆಂಜರ್ ಮತ್ತು ತೇಜಾ ಹ್ಯಾಂಡೀ ಕಾರ್ಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಜಿ.ಎಸ್ ಬಾನುಪ್ರಸಾದ್ ಗಾರು ಅವರು ದೀಪಬೆಳಗಿಸಿ ಬಿಡುಗಡೆಗೊಳಿಸುದರು. ಈ ಸಮಯದಲ್ಲಿ ನಾಲ್ಕು ಗ್ರಾಹಕರಿಗೆ ವಾಹನಗಳನ್ನ ನೀಡಲಾಯಿತು. ಸ್ವಸ್ತಿಕ್ ಆಟೋ ಮಾರ್ಟ್ ನ ಎಮ್.ಡಿ ಧನ್ ರಾಜ್ ಕರ್ಕೆರ ಅಧ್ಯಕ್ಷತೆಯನ್ನು ವಹಿಸಿದ್ದರು,

ಈ ಸಂದರ್ಭ ಮೂಡಬಿದ್ರೆ ಯೂನಿಯನ್ ಬ್ಯಾಂಕ್ ಇದರ ಮತ್ತು ಮ್ಯಾನೇಜರ್ ರಮೀಝ್ ಖಾನ್,ವೆಂಕಟರಮಣ ಬ್ಯಾಂಕ್ ನ ಮ್ಯಾನೇಜರ್ ವಿಶ್ವನಾಥ, ಸಂಸ್ಥೆಯ ಟೆರಿಟರಿ ಮ್ಯಾನೇಜರ್ ಶಶಿಕುಮಾರ್,ಶ್ರೀನಿವಾಸ ಮೂರ್ಜೆ ಇನ್ನಿತರರು ಉಪಸ್ಥಿತರಿದ್ದರು.

ಈ ಸಮಯದಲ್ಲಿ ಸ್ವಸ್ತಿಕ್ ಆಟೋ ಮಾರ್ಟ್ ಸಂಸ್ಥೆಯ ಬಂಟ್ವಾಳ ಶಾಖೆಯ ಮಾಲಕರಾದ ಮೋಹಿತ್ ಕುಮಾರ್,ಬೆಳ್ತಂಗಡಿ ಶಾಖೆಯ ರಾಘವೇಂದ್ರ ಪೂಜಾರಿ ,ಮಂಗಳೂರಿನ ರೋಶನ್ ಜೊತೆಗಿದ್ದರು,ಸಂಸ್ಥೆಯ ಸಿಬ್ಬಂದಿ ರಮಿತ ಅಥಿಗಳನ್ನ ಸ್ವಾಗತಿಸಿದ್ದು ಸಂತೋಷ್ ಬೇಂಕ್ಯ ಸಂಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.
