ಬಂಟ್ವಾಳದ ಮುಕ್ಕುಡದಲ್ಲಿ ಮತ್ತೆ ಭೂಕುಸಿತ
ಬಂಟ್ವಾಳ: ಇತ್ತಿಚೆಗೆ ಭೂ ಕುಸಿತ ಉಂಟಾಗಿ 3 ಮಂದಿ ಕೇರಳ ಮೂಲದ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಮೃತಪಟ್ಟ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ಹೆನ್ರಿ ಕಾರ್ಲೋ ಅವರ ಮನೆಗೆ ಇದ್ದ ರಸ್ತೆ ಸಂಪರ್ಕವೂ ಕಡಿತಗೊಂಡಿದೆ.
ಇತ್ತೀಚೆಗೆ ಭೂ ಕುಸಿತ ಆದ ಸಂದರ್ಭ ಗುಡ್ಡ ಬಿರುಕು ಬಿಟ್ಟಿತ್ತು. ಭಾರಿ ಮಳೆಗೆ ಮಣ್ಣು ಮೆದುಗೊಂಡು ಬಿರಿಕು ಬಿದ್ದ ಜಾಗದಿಂದಲೇ ಗುಡ್ಡ ಕುಸಿದಿದೆ