ಬಂಟ್ವಾಳ ಮಣಿಹಳ್ಳದಲ್ಲಿ ಸರಣಿ ಅಪಘಾತ: ಮೆಸ್ಕಾಂ ಎಇಇ ಪ್ರವೀಣ್ ಜೋಶಿ ಮೃತ್ಯು
ಬಂಟ್ವಾಳ: ಮಣಿಹಳ್ಳದಲ್ಲಿ ಕಾರು ಮತ್ತು ಬಸ್ಸಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ವಿಟ್ಲ ಮೆಸ್ಕಾಂನ ಎಇಇ ಪ್ರವೀಣ್ ಜೋಶಿ ಅವರು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ.
ಎರಡು ಕಾರು ಹಾಗೂ ಬಸ್‍ಗಳ ನಡುವೆ ಅಪಘಾತ ನಡೆದಿದ್ದು, ಇನ್ನೊಂದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಕಡೆಯಿಂದ ವಗ್ಗ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ವಗ್ಗದ ಮದ್ವ ಮನೆಯಿಂದ ಕಾರಿನಲ್ಲಿ ಬರುತ್ತಿದ್ದ ಮೆಸ್ಕಾಂ ಎಇಇ ಪ್ರವೀಣ್ ಜೋಶಿ ಅವರ ಕಾರು ಮುಖಾಮುಖಿಯಾಗಿದ್ದು ಹಿಂಬದಿಯಿಂದ ಬಂದ ಸರಕಾರಿ ಬಸ್ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಜೋಶಿ ಅವರ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಗಾಯಾಳುವನ್ನು ಕಾರಿನೊಳಗಿಂದ ತೆಗೆಯಲು ಸಾರ್ವಜನಿಕರು ಹರಸಾಹಸ ಪಡಬೇಕಾಯಿತು.
ಕ್ರೇನ್ ಬಳಸಿ ವಾಹನಗಳನ್ನು ರಸ್ತೆಯಿಂದ ಬದಿಗೆ ಸರಿಸಲಾಯಿತು. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ ಮೂರ್ತಿ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಮೆಸ್ಕಾಂ ಎಇಇ ಪ್ರವೀಣ್ ಜೋಶಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.