ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ: ಪೊಳಲಿ ಕ್ಷೇತ್ರದಲ್ಲಿ ಚಾಲನೆ

ಬಂಟ್ವಾಳ: .14 ರಿಂದ . 26ರವರೆಗೆ ಬಂಟ್ವಾಳ  ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಕ್  ಉಳಿಪ್ಪಾಡಿಗುತ್ತು  ಅವರ ನೇತ್ರತ್ವದಲ್ಲಿ ನಡೆಯಲಿರುವ  ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ  ಚಾಲನೆ ನೀಡಲಾಯಿತು

 ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರಿಗೆ ಪಕ್ಷದ ಧ್ವಜವನ್ನು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಸ್ತಾಂತರ ಮಾಡಿ ಪಾದಾಯಾತ್ರೆಯನ್ನು ಆರಂಭಿಸಲಾಯಿತು ಸಂದರ್ಭ ಪೊಳಲಿ ಸರ್ವಮಂಗಳ ಸಭಾಂಗಣದಲ್ಲಿ ನಡೆದ ಸಭಾಕಾಐಕ್ರಮದಲ್ಲಿ ನಳಿನ್ ಕುಮಾರ್ ಮಾತನಾಡಿ, ನಾಯಕ ಪದಕ್ಕೆ ಅರ್ಥ ತುಂಬಿದವರು ಶಾಸಕ ರಾಜೇಶ್ ನಾಕ್  ಉಳಿಪ್ಪಾಡಿಯವರುರಾಜ್ಯದಲ್ಲಿ ವಿವಾದರಹಿತ  ಶಾಸಕರಲ್ಲಿ ಓರ್ವರು  ಎಂದು ಬಣ್ಣಿಸಿದರು.

ಬಂಟ್ವಾಳ ಬಿಜೆಪಿ ಹಾಗೂ ಶಾಸಕ ರಾಜೇಶ್ ನಾಕ್ ಅವರ  ಕಾಲಘಟ್ಟದಲ್ಲಿ ಧಾರ್ಮಿಕ ಕೇಂದ್ರಗಳು, ಗ್ರಾಮಗಳು ಸಮಗ್ರ ಅಭಿವೃದ್ಧಿ ಕಂಡಿದೆ. ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯಲ್ಲಿ ಅವರ ಕಾರ್ಯ ಶ್ಲಾಘನೀಯ ಎಂದರು. ನೂರಾರು ಕೋಟಿ ರೂ.ಗಳ ಅಭಿವೃದ್ಧಿ ಜೊತೆ ಬಂಟ್ವಳ ವಿಧಾಸಭಾ ಕ್ಷೇತ್ರವನ್ನು ಶಾಂತಿ ಸೌಹಾರ್ದತೆಯ ಕ್ಷೇತ್ರವನ್ನಾಗಿ ಮಾರ್ಪಾಡು ಮಾಡಿದ ಕೀರ್ತಿ ಶಾಸಕ ರಾಜೇಶ್ ನಾಕ್ ಅವರಿಗೆ ಸಲ್ಲುತ್ತದೆ. ಮರಳು ಮಾಫಿಯಾ, ಭೂ ಮಾಫಿಯಾ, ಗೂಂಡಾಗಿರಿಯ ರಾಜಕಾರಣ ನಿಂತುಹೋಗಿ, ಅಭಿವೃದ್ಧಿಯ ಪರ್ವ ಆರಂಭವಾಗಿದೆ. ರಾಜ್ಯದಲ್ಲಿ ಮೂರು ಬಾರಿ ಪಾದಯಾತ್ರೆ ಮಾಡಿದ ಶಾಸಕ ಹೆಗ್ಗಳಿಕೆ ಅವರದ್ದು ಎಂದು ತಿಳಿಸಿದರು

ಆತಂಕವಾದ , ಭ್ರಷ್ಟಾಚಾರವಾದ, ಪರಿವಾರವಾದ  ದೇಶಕ್ಕೆ ಕಾಂಗ್ರೆಸ್ ನೀಡಿರುವ ದೊಡ್ಡ ಕೊಡುಗೆಯಾಗಿದೆ. ಕಾಂಗ್ರೆಸ್ಸಿನ  ಪರಿವಾರ ರಾಜಕಾರಣಕ್ಕೆ ಬಿಜೆಪಿ ತಿಲಾಂಜಲಿ ಹಾಕಿದ್ದು,     ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆಕಾಂಗ್ರೆಸ್ ಇನ್ನೊಂದು ಹೆಸರು ಭಯೋತ್ಪಾದನೆ ಎಂಉ ಟೀಕಿಸಿದರು.   ಮಂಗಳೂರಿನಲ್ಲಿ ನಡೆದ  ಕುಕ್ಕರ್ ಬಾಂಬ್ ಸ್ಪೋಟಕ್ಕೂ  ಕಾಂಗ್ರೆಸ್ಗೂ ಲಿಂಕ್ ಇದೆ ಎಂದು ಆರೋಪಿಸಿದ ಅವರು  ೪೦ ಪರ್ಸೆಂಟ್ ಆರೋಪ ಮಾಡಿದ ಕೆಂಪಯ್ಯ ಜೈಲಿಗೆ ಹೋಗಿದ್ದಾರೆಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರೂ  ಜೈಲಿಗೆ ಹೋಗುತ್ತಾರೆ ಎಂದರು. ಹಲವಾರು ಜನಪರ ಯೋಜನೆಗಳು, ಧಾರ್ಮಿಕ ಕೇಂದ್ರಗಳ ಅಭಿವೃದ್ದಿ, ಗ್ರಾಮಗಳ ಅಭಿವೃದ್ದಿ ಮೂಲಕ  ಪ್ರಧಾನಿ ನರೇಂದ್ರ ಮೋದಿ ಭಾರತ್ ಜೋಡೋ ಮಾಡಿದರೆ ರಾಹುಲ್ ಗಾಂಧಿ ಭಾರತ್ ತೋಡೋ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರುವಿದ್ಯುತ್ ಕೇಳಿದ್ದಕ್ಕೆ  ಯುವಕನ್ನು ಜೈಲಿಗೆ ಅಟ್ಟಿದ  ಸರಕಾರ ನಿಮ್ಮದು, ಇನ್ನೂ ನೀವು ೨೦೦ ಯುನಿಟ್ ವಿದ್ಯುತ್ ಉಚಿತ ನೀಡಲು ಸಾಧ್ಯವೇ ಎಂದು ಡಿ.ಕೆ. ಶಿವಕುಮಾರ್ ಅವಾರಿಗೆ ಸವಾಲೆಸದರುಹರ್ಷ ಮತ್ತು ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಸಂಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತ್ರತ್ವದ ಸರಕಾರ ನಿಷೇಧ ಮಾಡಿ ಎದೆಗಾರಿಕೆ ತೋರಿದೆಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ರಾಜೇಶ್ ನಾಕ್ ಮಾತನಾಡಿ, ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಯಾವುದೇ ಚ್ಯುತಿ ಬರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ, ಮುಂದೆಯೂ ಎಲ್ಲರ  ಸಹಕಾರ ಆಶೀರ್ವಾದ  ಇರಲಿ ಎಂದು ಮನವಿ ಮಾಡಿದರು. ವೇದಿಕೆಯಲ್ಲಿ ಬಿಜೆಪಿ ಮಂಡಲ  ಅಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ .ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ತುಂಗಪ್ಪ ಬಂಗೇರ, ರಾಮ್ದಾಸ ಬಂಟ್ವಾಳ, ಮಾಧವ ಮಾವೆ, ಸುದರ್ಶನ್ ಬಜಪೊಳಲಿ ದೇವಸ್ಥಾನದ ಪ್ರಧಾನ  ಅರ್ಚಕ ನಾರಾಯಣ ಭಟ್, ಅರ್ಚಕ ರಾಮ್ ಭಟ್, ರವೀಶ್ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.