ಬಂಟ್ವಾಳ: ಛತ್ರಪತಿ ಶಿವಾಜಿ ವೃತ್ತ ಉದ್ಘಾಟನೆ

ಬಂಟ್ವಾಳ: ವಿಶ್ವಹಿಂದೂ ಪರಿಷತ್- ಮಾತೃಶಕ್ತಿ ದುರ್ಗಾವಾಹಿನಿ ಬಜರಂಗ ದಳ ಛತ್ರಪತಿ ಶಾಖೆ ಕುಮ್ಡೇಲು ಇದರ ಆಶ್ರಯದಲ್ಲಿ ಕಡೆಗೋಳಿ ಶ್ರೀ ಪೊಳಲಿ ರಾಜರಾಜೇಶ್ವರೀ ಮಹದ್ವಾರದ ಬಳಿ ನೂತನವಾಗಿ ನಿರ್ಮಾಣಗೊಂಡ ಪೂರ್ಣ ಕುಂಭ ಕಲಶ ಮಾದರಿಯ ಛತ್ರಪತಿ ಶಿವಾಜಿ ವೃತ್ತ ಉದ್ಘಾಟನಾ ಸಮಾರಂಭ ನೆರವೇರಿತು.

bantwala


ನೂತನ ಛತ್ರಪತಿ ಶಿವಾಜಿ ವೃತ್ತವನ್ನು ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಉದ್ಘಾಟಸಿ, ದೀಪ ಪ್ರಜ್ವಲಿಸಿದರು. ಈ ಸಂದರ್ಭ ಬಜರಂಗದಳ ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು, ವಿಶ್ವ ಹಿಂದೂ ಪರಿಷತಯ್ ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಉಪಾಧ್ಯಕ್ಷ ಸುರೇಶ್ ಬೆಂಜನಪದವು, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ಬಂಟ್ವಾಳ ತಾಲೂಕು ಸಂಚಾಲಕ ಶಿವಪ್ರಸಾದ್ ತುಂಬೆ, ಸಂಸ್ಕಾರ ಭಾರತಿ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ ಸಂಘಟನೆಯ ಮುಖಂಡರಾದ ಪ್ರಸಾದ್ ಬೆಂಜನಪದವು, ಸಂತೋಷ್ ಸರಪಾಡಿ, ಪ್ರವೀಣ್ ಕುಂಟಾಲಪಲ್ಕೆ, ಕಿರಣ್, ಪ್ರಮುಖರಾದ ತೇವು ತಾರನಾಥ ಕೊಟ್ಟಾರಿ, ಮನೋಜ್ ಆಚಾರ್ಯ ನಾಣ್ಯ, ರವೀಂದ್ರ ಕಂಬಳಿ, ಗಣೇಶ್ ಸುವರ್ಣ ತುಂಬೆ, ಸೋಮಪ್ಪ ಕೋಟ್ಯಾನ್, ಭಾಸ್ಕರ ಚೌಟ, ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ವೃತ್ತ ನಿರ್ಮಾಣದ ವಿವಿಧ ಕೆಲಸಗಳನ್ನು ನಿರ್ವಹಿಸಿದ ನವೀನ್, ಗಿರೀಶ್ ಸಂತೋಷ್ ಅವರನ್ನು ಗೌರವಿಸಲಾಯಿತು. ನೂತನವಾಗಿ ನಿರ್ಮಾಣಗೊಂಡ ಪೂರ್ಣಕುಂಭ ಕಲಶ ಮಾದರಿಯ ವೃತ್ತ ಕಡೆಗೋಳಿಯ ಆಕರ್ಷಣೆ ಹೆಚ್ಚಿಸಿದೆ.

Related Posts

Leave a Reply

Your email address will not be published.