ಯುವಕನನ್ನು ಕತ್ತಿಯಿಂದ ಕಡಿದು ಕೊಲೆ : ಕೈಕಂಬದ ತಲಪಾಡಿಯಲ್ಲಿ ನಡೆದ ಘಟನೆ

ಬಂಟ್ವಾಳ: ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡು ಕತ್ತಿ ಯಿಂದ ಕಡಿದು ಕೊಲೆ ನಡೆಸಿದ ಘಟನೆ ಜುಲೈ 4 ರಂದು ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ.

ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ. ಅತನ ಸ್ನೇಹಿತ ನೌಫಾಲ್ ಮತ್ತು ಇನ್ನೊಬ್ಬ ನ ಹೆಸರು ಸಿಕ್ಕಿಲ್ಲ ಇಬ್ಬರು ಸೇರಿ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ.ಇವರು ಗಾಂಜ ಗಿರಾಕಿಗಳಾಗಿದ್ದು , ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೊಟೇಲ್ ಒಂದರ ಸಮೀಪದಲ್ಲಿ ರಾತ್ರಿ ಒಂದು ಗಂಟೆಯ ವೇಳೆ ಮಾತಿಗೆ ಮಾತು ಬೆಳೆದು ಗಾಂಜ ವಿಚಾರದಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಮೂವರು ಗಾಂಜ ಸೇವಕರು ಮತ್ತು ಮಾರಾಟ ಗಾರರು ಎಂಬ ಮಾತುಗಳು ಸ್ಥಳೀಯ ರಿಂದ ಹೇಳಲಾಗುತ್ತಿದ್ದು, ಇತ್ತೀಚಿಗೆ ಗಾಂಜಾ ವಿಚಾರದಲ್ಲಿ ಗಲಾಟೆ ಗಳು ನಡೆಯು ವುದು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ . ಘಟನಾ ಸ್ಥಳಕ್ಕೆ ಪೋಲಿಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಎಸ್.ಐ.ಅವಿನಾಶ್ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Posts

Leave a Reply

Your email address will not be published.