ಬಂಟ್ವಾಳ: ಪ್ರೊ. ಡಾ. ಶಿವಪ್ರಸಾದ್. ಕೆ ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ

ಬಂಟ್ವಾಳ: ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ನೀಡುವ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಯನ್ನು ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ದೇರಳಕಟ್ಟೆಯ ಯೆನಪೊಯ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಮತ್ತು ಡೀನ್ ಪ್ರೊ. ಡಾ.ಶಿವಪ್ರಸಾದ್ ಕೆ. ಅವರಿಗೆ ನೀಡಿ ಗೌರವಿಸಲಾಯಿತು.


ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಪುಂಜಲಾಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ ೪೦ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನ.೧೬ ಮತ್ತು ನ.೧೭ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಾರಾಜ್ಯ ಮಟ್ಟದ ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್ ಕಬಡ್ಡಿ ಉತ್ಸವ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಕೆ. ರಾಮಪ್ಪ ಸುವರ್ಣ ಮತ್ತು ಶ್ರೀಮತಿ ಸಬಿತ ರವರ ಸುಪುತ್ರರಾಗಿರುವ ಡಾ.‌ ಶಿವಪ್ರಸಾದ 1991ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಹೆಚ್.ಎಮ್.ಎಸ್ ಪದವಿ, 2004 ರಲ್ಲಿ ಹೋಮಿಯೋಪತಿಯಲ್ಲಿ ಔರಂಗಬಾದ್ ಬಾಬಾ ಸಾಹೇಬ್ ಅಂಬೇಡ್ಕರ್ ಆರೋಗ್ಯ ವಿಶ್ವವಿದ್ಯಾಲಯದಿಂದ‌ ಎಂ.ಡಿ ಪದವಿ ಪಡೆದವರು.


ಒರ್ಗೊನೋನ್ ಒಫ್ ಮೆಡಿಸಿನ್ ಮತ್ತು ಹೋಮಿಯೋಪಥಿ ಫಿಲೋಸೊಫಿಯಲ್ಲಿ ವಿಶೇಷ ಪ್ರಾವೀಣ್ಯತೆಯನ್ನು ಪಡೆದವರು.
33 ವರ್ಷ ಬೋಧನಾ ಅನುಭವ. 45 ಸ್ನಾತಕ್ಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ 10 ಸಂಶೋಧನ ಲೇಖನ ಪ್ರಕಟಣೆಯಾಗಿದೆ.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ 2013 ರಿಂದ 2020 ರವರೆಗೆ ಪ್ರಾಂಶುಪಾಲರಾಗಿ , ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಡೀನ್ ಆಗಿ , ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಆರೋಗ್ಯ ವಿಜ್ಞಾನಗಳ ಬೋರ್ಡ್ ಒಫ್ ಸ್ಟಡೀಸ್ ಚಯರ್‌ಮ್ಯಾನ್ ಆಗಿ, ಆಯುಷ್ ವೈದ್ಯಕೀಯ ಪದ್ಧತಿ ನ್ಯಾಕ್ ಮೌಲ್ಯಮಾಪಕರಾಗಿ, ರಾಜೀವ್ ವಿಶ್ವವಿದ್ಯಾನಿಲಯದ ಐ.ಕ್ಯು.ಎಮ್.ಸಿ ಸದಸ್ಯರಾಗಿ, ಕೇಂದ್ರೀಯ ಹೋಮಿಯೋಪಥಿ ಸಂಶೋಧನಾ ಕೌನ್ಸಿಲ್‌ನ ಒಡಂಬಡಿಕೆಯೊಂದಿಗೆ ಸಂಶೋಧನಾ ಸಂಯೋಜಕ ಆಯುಷ್ ವೈದ್ಯಕೀಯ ಪದ್ಧತಿಯ ಆರ್.ಒ.ಟಿ.ಪಿ ಕಾರ್ಯಕ್ರಮಗಳ ನಾಮನಿರ್ದೇಶಿತ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ, ಅಂತರಾಷ್ಟ್ರೀಯ ವೈದ್ಯಕೀಯ ಸಮ್ಮೇಳನಗಳಲ್ಲಿ ತಮ್ಮ ಶುಶೂಷಾ ಲೇಖನಗಳನ್ನು ಮಂಡಿಸಿದ್ದಾರೆ.


2019 ರಲ್ಲಿ ಉಗಾಂಡ ದೇಶದ ಆರೋಗ್ಯ ಇಲಾಖೆಯ ವಿನಂತಿಯ ಮೇರೆಗೆ ಅಲ್ಲಿಯ ಪಾರ್ಲಿಮೆಂಟ್ ವೈದ್ಯಕೀಯ ನಿಯೋಗ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಭೇಟಿಯಲ್ಲಿ ಹೋಮಿಯೋಪಥಿಯನ್ನು ಶೈಕ್ಷಣಿಕವಾಗಿ ಮತ್ತು ಆರೋಗ್ಯ ಪದ್ಧತಿಯಲ್ಲಿ ಆಳವಡಿಸುವ ಮಾರ್ಗಸೂಚಿಗಳನ್ನು ಮನವರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಆಗಿ ವಿಶ್ವವಿದ್ಯಾಲಯ ಪ್ರಾಯೋಜಿತ ಏಡ್ಸ್ ಜಾಗೃತಿ ತರಬೇತುದಾರರಾಗಿ ಕಾರ್ಯಾಗಾರಗಳನ್ನು, ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.


ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 1991ರ ಸಮಯದಿಂದಲೂ ಹೋಮಿಯೋಪಥಿಯ ವೈದ್ಯಕೀಯ ಪದ್ಧತಿಯ ಅರಿವನ್ನು ಮೂಡಿಸಲು ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಶಿಬಿರಗಳ ಸಂಯೋಜಕರಾಗಿ, ತಜ್ಞ ಹೋಮಿಯೋಪಥಿ ವೈದ್ಯರಾಗಿ 33 ವರ್ಷಗಳ ವೈದ್ಯಕೀಯ ಸೇವೆ- ವಿಶೇಷವಾಗಿ ಸೊರಿಯಾಸಿಸ್, ಸಂಧಿವಾತ, ಹೋರ್ಮೋನ್ ಸಂಬಂಧಿತ ಸಮಸ್ಯೆಗಳು, ಬಂಜೆತನ, ಅಲರ್ಜಿ ಸಮಸ್ಯೆಗಳು, ಮನೋದೈಹಿಕ ಕಾಯಿಲೆಗಳು, ಮಕ್ಕಳ ಮತ್ತು ಸ್ತ್ರೀರೋಗಗಳ ಪರಿಹಾರ. ಕರ್ನಾಟಕ ಹೋಮಿಯೋಪಥಿ ವೈದ್ಯಕೀಯ ಮಂಡಳಿ, ಬೆಂಗಳೂರು ಇದರ ಚುನಾಯಿತ ಸದಸ್ಯನಾಗಿ ಹೋಮಿಯೋಪಥಿ ವೈದ್ಯಕೀಯ ಪದ್ಧತಿಯ ಅರಿವನ್ನು ಸಮಾಜದ ಪ್ರತಿಯೊಬ್ಬರಿಗೂ ತಲಪಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸಕ್ರಿಯ ಸದಸ್ಯರಾಗಿ 2020-21ರ ಸಾಲಿನ ರೋಟರಿ ಜಿಲ್ಲೆ 3181ರ ಅಸಿಸ್ಟೆಂಟ್ ಗವರ್ನರ್ 2024 – 25ರ ಸಾಲಿನ ರೋಟರಿ ಜಿಲ್ಲೆ 3181ರ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ವೈದ್ಯ ಸಾಹಿತ್ಯ ಸೇವೆಯಲ್ಲೂ ಇವರ ಕೊಡುಗೆ ಅಪಾರ. ಇವರ ಸಾಧನೆಗೆ
ನ್ಯಾಶನಲ್ ಮೆಡೈಪ್ ಇಂಡಿಯಾ ಅವಾರ್ಡ್ ಫೋರ್ ಎಕ್ಸಲೆನ್ಸ್ ಇನ್ ಹೆಲ್ತ್ ಕೇರ್, ಹೋಮಿಯೋ ಆಚಾರ್ಯ -2018, ಕನ್ನಡ ವೈದ್ಯಸಾಹಿತ್ಯ ಕ್ಷೇತ್ರದ ಸಾಧನೆಗೆ ರಾಜೀವ ಗಾಂಧಿ ಮಹಾವಿಶ್ವವಿದ್ಯಾಲಯದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.


Related Posts

Leave a Reply

Your email address will not be published.