ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇಗುಲ ಧಾರ್ಮಿಕ ಸಭಾ ಕಾರ್ಯಕ್ರಮ

ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಅಷ್ಟ- ಬಂಧ ಬ್ರಹ್ಮಕಲಕೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ವಾಸ್ತು ತಜ್ಞ ಯಕ್ಷಗಾನ ಪ್ರಸಂಗ ಕರ್ತರಾದ ಡಾ. ಬಸವರಾಜ್ ಶೆಟ್ಟಿಗಾರ್ ಕಾರ್ಯಕ್ರಮ ಉದ್ಘಾಟಿಸಿದರು ಅವರು ಮಾತನಾಡಿ ದಕ್ಷ ಸಂಹಾರ ವಾದ ನಂತರ ವೀರಭದ್ರನು ಶೃಂಗ ಗಿರಿಯಲ್ಲಿ ನೆಲೆಸಿರುವಾಗ ಬ್ರಹ್ಮಶ್ರೀ ಅಡಕತ್ತಾಯರ ಭಕ್ತಿಗೆ ಒಲಿದು ಪರಮ ಪಾವನ ಪುಣ್ಯ ಪೃಥ್ವಿ ಪರುಶಾಮನ ಸೃಷ್ಟಿಗೆ ಒಲಿದು ಬಂದು ಬಾರ್ಕೂರು ಸಂಸ್ಥಾನ ರಾಜರಿಂದ ಪ್ರಪ್ರಥಮವಾಗಿ ವೀರಭದ್ರನ ಪ್ರತಿಷ್ಠೆ ಆಗಿ ಪದ್ಮಶಾಲಿ ಜನಾಂಗದ ಮೂಲ ಕ್ಷೇತ್ರವೇ ಬಾರ್ಕೂರು ಜನಜನಿತವಾಗಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್ ಎ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಶ್ರೀ ಸಚಿನ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ( ರಿ) ಬ್ರಹ್ಮಾವರ ಯೋಜನಾಧಿಕಾರಿ ರಮೇಶ್ ಪಿಕೆ,
ಎಂ.ಸಿ.ಇ ಟೆಕ್ನಾಕ್ರೇಟ್ಸ್ ಪ್ರೈ.ಲಿ ನಿರ್ದೇಶಕರಾದ ಭಗವಾನ್ ದಾಸ್ ಶೆಟ್ಟಿಗಾರ್, ಕಿನ್ನಿಮುಲ್ಕಿ ಶ್ರೀ ವೀರಭದ್ರ ಶ್ರೀ ಶಾಂತದುರ್ಗ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಭಾಶಂಕರ್ ಪದ್ಮಶಾಲಿ, ಸುರತ್ಕಲ್ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ಮತ್ತು ಶ್ರೀ ಪುರಾತನ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರು ಆನಂದ ಗುರಿಕಾರ್, ಕಾಪು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಅಧ್ಯಕ್ಷರು ಜಯಕರ ಶೆಟ್ಟಿಗಾರ್, ಕಾರ್ಕಳ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಜನಾರ್ಧನ ಶೆಟ್ಟಿಗಾರ್, ಎರ್ಮಾಳು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಅಧ್ಯಕ್ಷರು ವಿವೇಕ್ ಬಾಬು ಶೆಟ್ಟಿಗಾರ್ ಇನ್ನಾ, ಪಡುಬಿದ್ರಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಂದರ್ ಶೆಟ್ಟಿಗಾರ್, ನಿವೃತ್ತ ಎಜಿಎಂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಠಲ್ ಶೆಟ್ಟಿಗಾರ್ ಸಗ್ರಿ, ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಪುರೋಷೋತ್ತಮ ಸಿ ಮಣಿಪಾಲ್ ಇದ್ದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ದುರ್ಗಾಪರಮೇಶ್ವರಿ ಮಹಿಳಾ ವೇದಿಕೆಯ ಸದಸ್ಯರು ಪ್ರಾರ್ಥಿಸಿದರು.ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಡಾ. ಶಿವಪ್ರಸಾದ್ ಕೆ ಉಡುಪಿ ಸ್ವಾಗತಿಸಿದರು. ಸುಧಾಕರ್ ವಕ್ವಾಡಿ ಮಾಲತಿ ಸೋಮಶೇಖರ್ ಶೆಟ್ಟಿಗಾರ್ ಮತ್ತು ಶಿಕ್ಷಕ ನಾರಾಯಣ ಶೆಟ್ಟಿಗಾರ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿಗಾರ್ ಚೇರ್ಕಾಡಿ ವಂದಿಸಿದರು.