ಬೆಳ್ಳಾರೆ: ಜೂ. 8ರಂದು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ.: ಬೆಳ್ಳಾರೆಯಲ್ಲಿ 26ನೇ ಶಾಖೆ ಪ್ರಾರಂಭ

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಇದರ 26ನೇ ಶಾಖೆಯ ಬೆಳ್ಳಾರೆಯ ಪ್ರಸಾದ್ ಟೆಕ್ಸ್ ಟೈಲ್ ಕಟ್ಟಡದ ನೆಲ ಮಹಡಿಯಲ್ಲಿ ಜೂನ್ 8ರಂದು ಉದ್ಘಾಟನೆಗೊಳ್ಳಲಿದೆ.

ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ೨೬ನೇ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಕ್ರೆಡಿಟ್ ಕೊ ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೆ. ಜೈರಾಜ್ ಬಿ ರೈ ವಹಿಸಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್. ಕೊಳ್ತಿಗೆ ಕೃಷಿಪತ್ತಿನ ಸಹಕಾರ ಸಂಘದ ಸ್ಥಾಪಕಾಧ್ಯಕ್ಷರಾದ ಪಟೇಲ್ ನಾರಾಯಣ ರೈ ಪಾಲ್ತಾಡು, ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಎಸ್.ಎನ್. ಮನ್ಮಥ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷರಾದ ನಮಿತ ಎಲ್ ರೈ, ಡಾ. ನರಸಿಂಹ ಶರ್ಮ ಕಾನಾವು, ರಾಜೀವಿ ರೈ, ಪನ್ನೆಗುತ್ತು ಸುರೇಶ್ ಕುಮಾರ್ ಶೆಟ್ಟಿ, ಬಿ. ನರಸಿಂಹ ಜೋಶಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸ್ವಾಗತ ಬಯಸುವವರು ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈ. ಉಪಾಧ್ಯಕ್ಷರಾದ ಲಕ್ಷ್ಮೀ ಜಯಪಾಲ ಶೆಟ್ಟಿ, ಮಹಾಪ್ರಬಂಧಕರಾದ ಗಣೇಶ್ ಜಿ.ಕೆ. ಚಂದ್ರಹಾಸ್ ಶೆಟ್ಟಿ ಹಾಗೂ ನಿರ್ದೇಶಕರುಗಳು..

Related Posts

Leave a Reply

Your email address will not be published.