ರಿಕ್ಷಾ ನಿಲ್ದಾಣದಲ್ಲಿ ಬೃಹತ್ ಗಾತ್ರದ ಅಪಾಯಕಾರಿ ಗುಂಡಿ

ಬೆಳ್ತಂಗಡಿ ಪಟ್ಟಣದಲ್ಲಿರುವ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿರುವ ಖಾಸಗಿ ರಿಕ್ಷಾ ನಿಲ್ದಾಣದಲ್ಲಿ ಬೃಹತ್ ಗಾತ್ರದ ಅಪಾಯಕಾರಿ ಗುಂಡಿಯೊಂದು ನಿರ್ಮಾಣವಾಗಿದೆ.

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೊಯ್ಯೂರು ಖಾಸಗಿ ರಿಕ್ಷಾ ನಿಲ್ದಾಣದಲ್ಲಿ ಈ ಅಪಾಯಕಾರಿ ಗುಂಡಿ ನಿರ್ಮಾಣವಾಗಿದೆ. ಈಗಾಗಲೇ ಗುಂಡಿ ಬಿದ್ದು ವಾರವಾಗಿದ್ದರೂ ಕೂಡ ಪಟ್ಟಣ ಪಂಚಾಯತ್ ಆಡಳಿತ ಮೌನವಾಗಿದೆ. ಇಲ್ಲಿ ದಿನನಿತ್ಯ ನೂರಾರು ವಾಹನಗಳು ಚಲಿಸುತ್ತದೆ. ಸಮೀಪದ ಕಿಸಾನ್ ಟ್ರೆಡರ್ಸ್ ಗೆ ಹತ್ತಾರು ಟನ್ ಗಳಷ್ಟು ರಸಗೊಬ್ಬರ ಹೊತ್ತು ಬೃಹತ್ ಗಾತ್ರದ ಲಾರಿಗಳು ಬರುತ್ತದೆ. ಗುಂಡಿ ಸುಮಾರು 5 ಅಡಿಯಿದ್ದು , ಸುರಂಗ ಮಾರ್ಗದಂತೆ ಗೋಚರಿಸುತ್ತದೆ. ಆದರೆ ಈ ತನಕವೂ ಪಟ್ಟಣ ಪಂಚಾಯತ್ ಅಪಾಯಕಾರಿ ಗುಂಡಿ ಮುಚ್ಚಲು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ರಿಕ್ಷಾ , ಜೀಪ್ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
