ಅನಧಿಕೃತ ಪ್ಲೆಕ್ಸ್ ಬ್ಯಾನರ್ ಅಳವಡಿಕೆ : ಯುವಕ ಬಲಿ : ಪರಿಹಾರ ಒದಗಿಸುವಂತೆ ಆಗ್ರಹ

ಭಾರತೀಯ ಮಜ್ದೂರು ಸಂಘದ ಕುಟುಂಬ ಮಿಲನ ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾವುದೇ ಅನುಮತಿ ಇಲ್ಲದ, ಅನಧಿಕೃತ ಫ್ಲಕ್ಸ್ ಬ್ಯಾನರ್ ಅಳವಡಿಕೆ ಸಂದರ್ಭದಲ್ಲಿ ವಿದ್ಯುತ್ ಅಪಘಾತ ಸಂಭವಿಸಿ ಅಮಾಯಕ ಯುವಕನೊರ್ವ ಬಲಿಯಾದ ಘಟನೆ ದುರದೃಷ್ಟಕರ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಬೆಳ್ತಂಗಡಿ ತಾಲೂಕು ಸಮಿತಿ ಹೇಳಿದೆ.

ತಾಲೂಕಿನಾದ್ಯಂತ ಪ್ರಚಾರ, ಪ್ರತಿಷ್ಠೆಗೊಸ್ಕರ ಸ್ಥಳೀಯಾಡಳಿತದ ಅನುಮತಿ ಪಡೆಯದೆ, ಅನಧಿಕೃತವಾಗಿ ಪ್ಲೆಕ್ಸ್ , ಬ್ಯಾನರ್ ಅಳವಡಿಸುವ ಪ್ರಚಾರ ರಾಜಕೀಯದ ನೀಚತನ ಪ್ರದರ್ಶಿಸಲಾಗುತ್ತಿದೆ. ಈ ಘಟನೆಯಲ್ಲಿಯೂ ಕೇವಲ ಪ್ರಚಾರ , ಪ್ರತಿಷ್ಠೆಗಾಗಿ ಸ್ಥಳೀಯಾಡಳಿತದ ಅನುಮತಿ ಪಡೆಯದೆ ಫ್ಲಕ್ಸ್ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಮೆಸ್ಕಾಂ ಇಲಾಖೆಯ ಅನುಮತಿ ಇಲ್ಲದೆ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಗೆ ಫ್ಲಕ್ಸ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ವಿದ್ಯುತ್ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ , ಇನ್ನೊಬ್ಬ ಗಂಭೀರ ಗಾಯಗೊಂಡ ಘಟನೆ ಅತ್ಯಂತ ದುರಾದೃಷ್ಟ ಎಂದು ಸಿಐಟಿಯು ಹೇಳಿದೆ. ಬಿಎಂಎಸ್ ಸಂಘಟನೆಯ ಬೇಜವಾಬ್ದಾರಿಯಿಂದಾಗಿ ಈ ಘಟನೆ ನಡೆದಿದ್ದು , ಈ ಘಟನೆಯ ನೈತಿಕ ಹೊಣೆ ಹೊತ್ತು ಮೃತ ಯುವಕನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

Related Posts

Leave a Reply

Your email address will not be published.