ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ವಿಷ್ಣುಪಾಂಡ್ಯಾವರವರಿಗೆ ‘ಲಿಟೆರರಿ ಅವಾರ್ಡ್’

ಬೆಂಗಳೂರಿನ ಸೌಂದರ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸಭಾಂಗಣದಲ್ಲಿ ಗ್ಲೋಬಲ್ ಮೋಟಿವೇಷನಲ್ ಸ್ಟ್ರಿಪ್ಸ್ ಅಡ್ಮಿನಿಸ್ಟ್ರೇಷನ್ ಹಾಗೂ ಗುಜರಾತ್ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಲಿಟೆರರಿ ಅವಾರ್ಡ್’ ಕಾರ್ಯಕ್ರಮವನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಮತ್ತು ಎಲ್ಲಾ ಅತಿಥಿ ಗಣ್ಯರು ಸೇರಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ.ಟಿ.ಶಿವಕುಮಾರ್ ನಾಗರ ನವಿಲೆಯವರು, ವಿಶ್ವ ಮಟ್ಟದ ಕವಿ ಸಾಹಿತಿಗಳನ್ನು ಗುರುತಿಸಿ, ಅಂತರಾಷ್ಟ್ರೀಯ ಮಟ್ಟದ ವೇದಿಕೆ ನೀಡುವ ಉದ್ದೇಶ ಹೊಂದಿರುವ ಮೋಟಿವೇಷನಲ್ ಸ್ಟ್ರಿಪ್ಸ್ ಅಡ್ಮಿನಿಸ್ಟ್ರೇಷನ್ ವಿಶ್ವದ ಸುಮಾರು 163 ದೇಶಗಳಲ್ಲಿ ಬೇರು ಬಿಟ್ಟಿದ್ದು, ಬರಹಗಾರರಿಗೆ ಜೀವ ತುಂಬುತ್ತಿದೆ. ಬೇರ್ಪಟ್ಟ ಪ್ರೇಮಿಗಳನ್ನ, ಕುಟುಂಬವನ್ನು ಒಗ್ಗೂಡಿಸುವಂತಹ ಶಕ್ತಿ ಸಾಹಿತ್ಯಕ್ಕಿದ್ದು, ಸಮಾಜದಲ್ಲಿ ಸಾಹಿತ್ಯ ಬಹು ಮುಖ್ಯ ಪಾತ್ರ ವಹಿಸುತ್ತಿದೆ. ಭಾವನೆಗಳು ಬರಹವಾಗಿ, ಬರಹ ಸಾಹಿತ್ಯ ಪ್ರಕಾರ ಪಡೆದು, ಸಾಹಿತ್ಯ ಸಿನಿಮಾ ರೂಪದಲ್ಲಿ ಹೊರಹೊಮ್ಮಿ ನಮ್ಮಲ್ಲಿ ಉತ್ತಮ ಬದಲಾವಣೆ ತರುತ್ತಿದೆ. ಈ ದಿನ ಎಲ್ಲಾ ಸರಸ್ವತಿ ಪುತ್ರರು ಈ ವೇದಿಕೆಯ ಕಳಶದಂತೆ ನನಗೆ ಭಾಸವಾಗುತ್ತಿದೆ. ರಾಜಕೀಯವಾಗಿ ದೇಶ-ವಿದೇಶಗಳ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ, ಬರಹಗಾರರು ಎಲ್ಲಾ ಮರೆತು, ವಿಶ್ವಮಾನವ ಸಂದೇಶವನ್ನು ಸಾರುತ್ತಿದ್ದಾರೆ.. ಭಾರತದ ವಿವಿಧ ರಾಜ್ಯಗಳಿಂದ ಕವಿ, ಸಾಹಿತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ. ಅದರಲ್ಲೂ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ವಿಷ್ಣು ಪಾಂಡ್ಯ ಹಾಗೂ ಇತರೆ ಸಾಧಕರ ಅಪಾರ ಸಾಧನೆಗಳನ್ನು ಗುರುತಿಸಿ ಲಿಟೆರರಿ ಅವಾರ್ಡ್ ನೀಡಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ನನ್ನನ್ನು ಆಹ್ವಾನಿಸಿದ ಸಂಸ್ಥೆಗೆ ಹಾಗೂ ಶ್ರೀಕಲಾರವರಿಗೆ ಧನ್ಯವಾದಗಳು. ಪ್ರಶಸ್ತಿಗೆ ಪಾತ್ರರಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಹಾಗೆಯೇ ಈ ದಿನ ನಾನು ಮಾತನಾಡಿದ ಕನ್ನಡ ಭಾಷೆಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿ, ಪರ ಭಾಷಿಗರಿಗೆ ಅರ್ಥೈಸಿದ ಗೀತಾ ಅನಗರವರಿಗೂ ಧನ್ಯವಾದಗಳು ಎಂದರು..

ಸೌಂದರ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸಿಇ ಓ ಕೀರ್ತನ್ ಕುಮಾರ್, ನೇಪಾಳದಿಂದ ತಾಯ್ನಾಡಿಗೆ ಆಗಮಿಸಿರುವ ಕೆಮಿಲ್ ಪೋಕ್ರಿಯಾಲ್, ಮಲೇಶಿಯಾದಲ್ಲಿ ಇದ್ದುಕೊಂಡು ಸಾಹಿತ್ಯ ಪ್ರಪಂಚದಲ್ಲಿ ಭಾರತದ ಸೊಗಡನ್ನು ಸಾರುತ್ತಿರುವ ಡಾ. ರಾಜರಾಜೇಶ್ವರಿ ಸೀತಾರಾಮನ್ ರವವರು , ಸ್ವಪ್ನ ಬೆಹರಾರವರು, ಲೇಖಕರು ಕವಿಗಳಾದ ಶ್ರೀಕಲಾ, ಭಾರತೀಯ ಮೂಲದ ಸಿಜುರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.