ಬೆಂಗ್ರೆ ಫೆ .12ರಂದು ಸರ್ವೇ ನಂಬರ್ ಸಹಿತ ಹಕ್ಕುಪತ್ರ ವಿತರಣೆ

ಸರ್ವೇ ನಂಬರ್ ಹಗೂ ಖಾತಾ ನೀಡಬೇಕು ಎನ್ನುವ ಬೆಂಗ್ರೆ ಗ್ರಾಮದ ಸಾರ್ವಜನಿಕರ ಬಹುಕಲಾದ ಬೇಡಿಕೆಯನ್ನು ಶಾಸಕರಾದ ವೇದವ್ಯಾಸ ಕಾಮತ್ ಅವರು ಈಡೇರಿಸಿದ್ದು, ಫೆ.12ರಂದು ಸಂಜೆ 5 ಗಂಟೆಗೆ ಬೆಂಗ್ರೆ ಫೆರಿ ಪಾಯಿಂಟ್ ಬಳಿಯ ಮಹಾಜನ ಸಂಘದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಮನೆಯವರಿಗೆ ಸರ್ವೇ ನಂಬರ್ ಸಹಿತವಾದ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಕಾರ್ಪೋರೇಟರ್ ಸುನೀತಾ ತಿಳಿಸಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಮೂಲಕ ಸುಮಾರು 20 ಸಾವಿರ ಮಂದಿಯಲ್ಲಿ ಸಮಸ್ಯೆ ಬಗೆಹರಿಯಲಿದ್ದು, ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಆನಂತರ ಮಂಗಳೂರು ನಗರ ಉತ್ತರ ಹಿಂದುಳಿದ ವರ್ಗಗಳ ಮೋರ್ಚಾದ ಅರವಿಂದ್ ಬೆಂಗ್ರೆ ಅವರು ಮಾತನಾಡಿ, ಸುಮಾರು 29 ವರ್ಷಗಳಿಂದ ಹಕ್ಕುಪತ್ರಕ್ಕೆ ಸರ್ವೇ ನಂಬರ್ ಹಾಗೂ ಖಾತಕ್ಕೆ ಹೋರಾಟ ಮಾಡುತ್ತಾ ಬಂದಿರುವ ಬೆಂಗ್ರೆ ಗ್ರಾಮದ ಜನರ ಬೇಡಿಕೆಯನ್ನು ಯಾವುದೇ ಸರ್ಕಾರ ಈಡೇರಿಸಿರಲಿಲ್ಲ. ಇಲ್ಲಿನ ನಿವಾಸಿಗಳು ಪಾಲಿಕೆ ವ್ಯಾಪ್ತಿಗೆ ಸೇರಿದಂದಿನಿಂದ ಕಟ್ಟಡ ತೆರಿಗೆ ಪಾವತಿಸುತ್ತಿದ್ದರೂ ವಿವಿಧ ನೆಪವೊಡ್ಡಿ ಅನ್ಯಾಯ ಮಾಡಲಾಗಿತ್ತು. ಇದೀಗ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಫೆ.12ರಂದು ಹಮ್ಮಿಕೊಂಡಿದ್ದಾರೆ ಎಂದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಸ್ಥಳೀಯರಾದ ಸಲೀಂ ಕಸಬಾ ಬೆಂಗ್ರೆ, ಮಹೇಶ್ ಬಿ.ಕೆ., ಹಾಗೂ ಮುಖಂಡ ಲೊಕೇಶ್ ಸುವರ್ಣ ಬೆಂಗ್ರೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published.