ಬಜರಂಗದಳ ಮುಟ್ಟಿದರೆ ರಾವಣನ ಲಂಕೆಯು ದಹನವಾದಂತೆ ಕಾಂಗ್ರೆಸ್ ದಹನವಾಗಲಿದೆ : ಡಾ.ಭರತ್ ಶೆಟ್ಟಿ ವೈ
ಹಿಂದೂ ಸಮಾಜದ ಶಕ್ತಿಯಾಗಿರುವ ಬಜರಂಗದಳವನ್ನು ಕನಸಿನಲ್ಲೂ ನಿಷೇಧಿಸುವ ಬಗ್ಗೆ ಯೋಚಿಸಬೇಡಿ, ರಾವಣನ ಲಂಕೆಯು ದಹನವಾದಂತೆ ಕಾಂಗ್ರೆಸ್ ದಹನವಾಗಲಿದೆ. ಮಾತ್ರವಲ್ಲ ಈಗಿನ ಅಳಿದುಳಿದ ನಿಮ್ಮ ಕಾಂಗ್ರೆಸ್ ಪಕ್ಷದ ಕುರುಹನ್ನು ಜನರೇ ಸಮೀಪದ ಅರಬೀ ಸಮುದ್ರದಲ್ಲಿ ವಿಸರ್ಜಿಸಲಿದ್ದಾರೆ. ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ,ಹಾಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ದೇಶ ಭಕ್ತ ,ಹಿಂದೂ ಸಮಾಜದ ಒಳಿತಿಗಾಗಿ ಹಾಗೂ ಸಾಮಾಜಿಕವಾಗಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಜರಂಗದಳ ಕೋಟಿ ಕೋಟಿ ಸದಸ್ಯರನ್ನು ಹೊಂದಿರುವ , ಪ್ರಬಲ ಹಿಂದೂ ಸಮಾಜದ ಅಸ್ಮಿತೆಯ ಪ್ರತಿರೂಪವಾಗಿದೆ. ರಾಷ್ಟ್ರೀಯತೆಯ ಶಕ್ತಿಯಾಗಿದೆ. ಒಗ್ಗಟ್ಟಿನ ಮತ್ತೊಂದು ಹೆಸರು ಬಜರಂಗದಳವಾಗಿದೆ.ಮುಸ್ಲಿಂ ಸಮಾಜದ ತುಷ್ಟೀಕರಣದ ನೀತಿಯ ಅಂಗವಾಗಿ ಬಜರಂಗದಳ ನಿಷೇಧ ಮಾಡುವ ಭರವಸೆ ನೀಡಿದೆ. ಇಂದಿರಾ ಗಾಂಧಿ ಆರ್‍ಎಸ್‍ಎಸ್ ನಿಷೇಧಿಸಲು ಯತ್ನಿಸಿ ಸೋತಿದ್ದರು. ಮುಸ್ಲಿಂ ಜಿಹಾದ್ ಹೋರಾಟವನ್ನು ಮಟ್ಟ ಹಾಕಲು ಆಗದ ಕಾಂಗ್ರೆಸ್ ವಿಶ್ವದ ಅತೀ ದೊಡ್ಡ ಸಂಘಟನೆಯ ನಿಷೇಧದ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡುತ್ತಿದೆ. ಹಾಗಾದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‍ನ ಯಾವ ಕುರುಹೂ ಇರುವುದಿಲ್ಲ .ಜನರೇ ಕಾಂಗ್ರೆಸ್ಸನ್ನು ಬುಡಸಹಿತ ಅರಬೀ ಸಮುದ್ರಕ್ಕೆ ಗುಡಿಸಿಹಾಕುತ್ತಾರೆ.
ಕಾಂಗ್ರೆಸ್ ಈ ನಿರ್ಧಾರದಿಂದ ಹಿಂದೂ ವಿರೋಧಿ ಪಕ್ಷ ಎಂಬುದು ಇದೀಗ ಪೂರ್ಣಪ್ರಮಾಣದಲ್ಲಿ ಸಾಬೀತಾಗಿದೆ.ರಕ್ತದಾನ,ಆರೋಗ್ಯ ಶಿಬಿರ,ಸರಕಾರದ ಸೌಲಭ್ಯ ಮನೆ ಮನೆ ಮುಟ್ಟಿಸುವ ಕಾರ್ಯ,ಕೊರೊನಾ ಸಂದರ್ಭ ಕೊರೊನಾ ಸಂಕಷ್ಟದಲ್ಲಿದ್ದ ಕೋಟಿ ಕೋಟಿ ಜನತೆಗೆ ಕಿಟ್ ಒದಗಿಸುವ ಮೂಲಕ ಜನಮಾನಸದಲ್ಲಿ ಇರುವ ಸಂಘಟನೆ.ಹಿಂದೂ ಸಮಾಜದ ಭದ್ರ ಬುನಾದಿಗೆ ಕೊಡುಗೆ ನೀಡುವ ಸಂಘಟನೆಯನ್ನು ನಿಮಗೆ ಮುಟ್ಟಲೂ ಸಾದ್ಯವಿಲ್ಲ.ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ನಾಯಕರು ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಲೇ ಬಂದಿದ್ದಾರೆ.
ಇದಕ್ಕೆ ಹಿಂದೂ ಸಮಾಜ ಒಟ್ಟಾಗಿ ಸೂಕ್ತ ಉತ್ತರ ನೀಡಲಿದೆ.ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ ಸಂಘಟನೆಗಳನ್ನು ನಿಷೇಧ ಮಾಡಲು ಸಾಧ್ಯವಾಗಿಲ್ಲ ,ಆದರೆ ಬಿಜೆಪಿ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿದೆ ಎಂದು ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಕಾಂಗ್ರೆಸ್‍ಗೆ ವಿನಾಶ ಕಾಲ ಈಗಲೇ ಎದುರಾಗಿದ್ದು,ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು ವಿಷ ಸರ್ಪ ಎಂದು ಹೇಳಿದರೆ, ಅವರ ಪುತ್ರ ಪ್ರಿಯಾಂಕ ಖರ್ಗೆ ನಾಲಾಯಕ್ ಎಂದು ಅವಹೇಳನದ ಮಾತು ಹೇಳಿದ್ದಾರೆ. ಇದೀಗ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂಬ ಮಾತು ಹೇಳಿ ಮಾಡಲು ಮುಂದಾಗಿ ಪದೇ ಪದೇ ಹಿಂದೂ ಸಮಾಜದ ನಾಶ ಮಾಡುವ ತಂತ್ರ ಹೂಡಿದಂತಿದ್ದು, ಒಂದು ವರ್ಗದ ಓಲೈಕೆ ಮಾಡುತ್ತಾ ಬಂದ ಈ ಹಿಂದೂ ವಿರೋಧಿ ಪಕ್ಷಕ್ಕೆ ಕರ್ನಾಟಕದ ಜನತೆ ಸೂಕ್ತ ಪಾಠವನ್ನು ಕಲಿಸುವುದು ನಿಶ್ಚಿತ. ನಿಮ್ಮ ಹಿಂದೂ ವಿರೋಧಿ ನೀತಿಯಿಂದ , ಸನಾತನ ಪರಂಪರೆ ಹಾಳು ಮಾಡುವ ಕುತಂತ್ರದಿಂದಆಡಳಿತಕ್ಕೆ ಬರುವುದು ಕನಸು ಎಂದು ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ