ಬೀಬಿಲಚ್ಚಿಲ್‍ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಫೆ.2ರಿಂದ 6ರ ವರೆಗೆ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಆಮಂತ್ರಣ ಪತ್ರಿಕೆ ಅನಾವರಣ, ನಿಧಿ ಸಂಗ್ರಹ, ಸಮಾಲೋಚನಾ ಸಭೆ
ಮಂಗಳೂರಿನ ಅದ್ಯಪಾಡಿ ಬೀಬಿಲಚ್ಚಿಲ್‍ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದದ ಜೀರ್ಣೋದ್ಧಾರ ಕಾಮಗಾರಿ ಹಾಗೂ ಮುಂದಿನ ಫೆಬ್ರವರಿ 2ರಿಂದ 6ರ ವರೆಗೆ ಬ್ರಹ್ಮ ಕಲಶೋತ್ಸವ ಹಾಗೂ ನಾಗಬ್ರಹ್ಮಮಂಡಲೋತ್ಸವದ ಸಮಾಲೋಚನಾ ಸಭೆಯು ನಡೆಯಿತು.
ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ದೀಪಪ್ರಜ್ವಲನೆ, ಬ್ರಹ್ಮ ಕಲಶ ಬ್ರಹ್ಮ ನಾಗಮಂಡಲ ಆಮಂತ್ರಣ ಪತ್ರಿಕೆ ಅನಾವರಣ ನಿಧಿ ಸಂಗ್ರಹ ಮುಂದಿನ ಕಾರ್ಯಕ್ರಮದ ಬಗ್ಗೆ ಸಮಾಲೋಚನೆ ಸಭೆ ಶ್ರೀ ಮಂಜುನಾಥ ಭಂಡಾರಿ ಮೂಡುಶೆಡ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ವೇದಮೂರ್ತಿ ಶ್ರೀ ಕೆ ಲಕ್ಷ್ಮೀ ನಾರಾಯಣ ಅಶ್ರಣ್ಣಾರು ಆಶೀರ್ವಾಚನ ನೀಡಿದರು.
ರಾಜೀವ ಆಳ್ವ ಅದ್ಯಪಾಡಿ ಗುತ್ತು, ಹರೀಶ್ ಶೆಟ್ಟಿ ಎತಮೊಗರು ದೊಡ್ಡಮನೆ, ಮೋಹನ್ ಶೆಟ್ಟಿ ಮಟೆಬೈಲು, ಸುಂದರ ಬಂಗೇರ, ಭುಜಂಗ ಕುಲಾಲ್, ಮಂಜುನಾಥ್ ಕುಂದರ್, ಡಾ. ರವೀಂದ್ರ ಕೌಡೂರು, ಶೇಕರ ಸಪಲಿಗ ಪಡುಪೆರಾರಾ, ಪುರುಷೋತ್ತಮ್ ಪೂಜಾರಿ ಕೌಡೂರು, ಉದಯಶೆಟ್ಟಿ ನಡಿ ಗುತ್ತು, ಶಿವರಾಮ ಅದ್ಯಪಾಡಿ ಪದವು, ಸಂಪತ್ ಕೊಳ್ಳೊಟು, ದೇವು ಸೌಹಾರ್ದ ನಗರ, ಪದ್ಮನಾಭ ಕೊಳಂಬೆ,ಮನೋಜ್ ಕೇಸರಿ ಫ್ರೆಂಡ್ಸ್, ಮುರಳಿ ಕೇಸರಿ ಫ್ರೆಂಡ್ಸ್, ನಾಗೇಶ್ ಕುಲಾಲ್ ಪಂಚಾಯತ್ ಸದಸ್ಯರು, ಕೇಶವ ಪೊಳಲಿ, ಶಿವಪ್ಪ ಬಂಗೇರ, ಉಮೇಶ್ ಮಳಲಿ, ವಿನಯ್ ಕುಮಾರ್ ನಿವೃತ ಪೆÇಲೀಸ್ ಅಧಿಕಾರಿ ರಾಘವ ಪಡೀಲ್, ಹಾಗೂ ಬೈಲು ಮಾಗಣೆಯ ಹಾಗೂ ಪರವೂರ ಹತ್ತು ಸಮಸ್ತರು ಉಪಸ್ಥಿತರಿದ್ದರು.