ಮಂಗಳೂರಿನ ಬಾಲಯೇಸುವಿನ ವಾರ್ಷಿಕ ಮಹೋತ್ಸವ -2023

ಮಂಗಳೂರಿನ ಬಿಕರ್ನಕಟ್ಟೆಯ ಕಾರ್ಮೇಲ್ ಹಿಲ್‍ನ ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಪ್ರಯುಕ್ತ ಹೊರಕಾಣಿಕೆ ಮತ್ತು ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಬಿಕರ್ನಕಟ್ಟೆಯ ಕಾರ್ಮೇಲ್‍ನ ಹಿಲ್‍ನ ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವೂ ಜನವರಿ 14 ರಿಂದ 16ರ ವರೆಗೆ ನಡೆಯಲಿದ್ದು, ಈ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ ಮಂಗಳೂರಿನ ಕುಲಶೇಖರ ಕೈಕಂಬದಿಂದ ಬಾಲ ಯೇಸು ಪುಣ್ಯಕ್ಷೇತ್ರದ ವರೆಗೆ ನೆರವೇರಿತು.

ಹೊರೆ ಕಾಣಿಕೆ ಮೆರವಣಿಗೆಗೆ ಸೈಂಟ್ ಜೋಸೆಫ್ ಮೊನೆಸ್ಟರಿ ಸುಪೀರಿಯರ್ ಫಾ. ಚಾರ್ಲ್ಸ್ ಸೆರಾವೊ ಚಾಲನೆ ನೀಡಿದರು.ಬಳಿಕ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಅವರು ಕಾರ್ಯಕ್ರಮಕ್ಕೆ ಶುಭಾ ಹಾರೈಸಿದ್ರು. ಕಾರ್ಯಕ್ರಮದಲ್ಲಿ ವಾಮಂಜೂರು ಚರ್ಚ್ ಧರ್ಮಗುರು ಫಾ. ಜೇಮ್ಸ್ ಡಿಸೋಜ, ಪಾಲಿಕೆ ಸದಸ್ಯರಾದ ನವೀನ್ ಡಿಸೋಜ, ಲ್ಯಾನ್ಸ್ ಲಾಟ್ ಪಿಂಟೊ, ಕಾವ್ಯಾ ನಟರಾಜ್, ಪ್ರವೀಣ್ ಚಂದ್ರ ಆಳ್ವ, ಎಸಿ ವಿನಯ್ ರಾಜ್, ಭಾಸ್ಕರ್ ಮೊಯ್ಲಿ, ಮಾಜಿ ಪಾಲಿಕೆ ಸದಸ್ಯೆ ಸಬಿತಾ ಮಿಸ್ಕಿತ್, ಬಾಲ ಯೇಸುವಿನ ಪುಣ್ಯಕ್ಷೇತ್ರದ ನಿರ್ದೇಶಕ ಫಾ. ರೋವೆಲ್ ಡಿಸೋಜಾ, ನಿರ್ದೇಶಕರಾದ ಫಾ. ಸ್ಟೀಫನ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.
