ಸರ್ಕಾರದಿಂದ ಅಧಿಕೃತ ಆದೇಶ ಬರುವ ತನಕ ಹೋರಾಟ ಕೈಬಿಡಲ್ಲ : ಪದ್ಮರಾಜ್ ಆರ್

ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಪಠ್ಯಭಾಗವನ್ನು ಸಮಾಜ ವಿಜ್ಞಾನದಲ್ಲೇ ಮರು ಸೇರ್ಪಡೆಗೆ ಆದೇಶಿಸುವಂತೆ ಶಿಕ್ಷಣ ಸಚಿವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಪಠ್ಯ ಸೇರ್ಪಡೆಗೆ ಶಿಕ್ಷಣ ಸಚಿವರತ ಮನವೊಲಿಸಿದ ಸಚಿವ ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೃತಜ್ಞತೆಗಳು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಆರ್. ಪದ್ಮರಾಜ್ ಹೇಳಿದ್ದಾರೆ.
ಆದಷ್ಟು ಶೀಘ್ರದಲ್ಲೇ ರಾಜ್ಯ ಸರಕಾರ ಈ ಬಗ್ಗೆ ಆದೇಶ ಹೊರಡಿಸಬೇಕು. ಅಧಿಕೃತ ಆದೇಶವಾದ ಕೂಡಲೇ ಈಗಾಗಲೇ ಕರೆ ನೀಡಲಾದ ಪ್ರತಿಭಟನಾ ಸಭೆಯನ್ನು ಕೈಬಿಡುವ ಬಗ್ಗೆ ನಿರ್ಧರಿಸಲಾಗುವುದು. ಗುರುಗಳ ಪಠ್ಯ ವಿಚಾರದಲ್ಲಿ ಸತ್ಯಾಂಶವನ್ನು ಸಮಾಜದ ಮುಂದಿಟ್ಟ ಮಾಧ್ಯಮಗಳಿಗೆ, ಸಮಾಜವಿಜ್ಞಾನದಲ್ಲಿ ಮರುಸೇರ್ಪಡೆಗೊಳಿಸಲು ಒತ್ತಾಯಿಸಿದ ಗುರುಗಳ ಅನುಯಾಯಿಗಳಿಗೆ, ಹೋರಾಟ ಬೆಂಬಲಿಸಿದ ಸಮಾಜದ ಸಂಘಟನೆಗಳು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಹಾಗೂ ಗಾಳಿ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಮಸ್ತ ಸಮಾಜ ಬಾಂಧವರಿಗೆ ಹೃದಯಪೂರ್ವಕ ಧನ್ಯವಾದಗಳು.