ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಕೂಡಲೇ ಅಂತಿಮ ಹಾಡಬೇಕು : ಪ್ರಣವಾನಂದ ಸ್ವಾಮೀಜಿ

ಬೆಂಗಳೂರಿನ ವಿಧಾನಸೌಧದಲ್ಲಿ ಕುಲಬಾಂಧವರು ಹಾಗೂ ರಾಜ್ಯದ ಹಿರಿಯ ಸಚಿವರಾಗಿರುವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆ ಹಾಗೂ ರಾಜ್ಯದ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಆರ್ಯ ಈಡಿಗ ಕೇಂದ್ರ ಹೋರಾಟ ಸಮಿತಿ ಹಾಗೂ ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಕೂಡಲೇ ಅಂತಿಮ ಹಾಡಬೇಕು ಎಂದು ಶ್ರೀಗಳು ಚರ್ಚಿಸಿದರು

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಮುದಾಯದ ಸಚಿವರಾದ ಶ್ರೀ ಕೊಟ ಶ್ರೀನಿವಾಸ್ ಪೂಜಾರಿ ಬರುವ ಸ್ವಲ್ಪ ದಿನದ ಒಳಗಡೆ ಸಮುದಾಯದ ಎಲ್ಲಾ ಶಾಸಕರು ಸಮುದಾಯದ ಸ್ವಾಮೀಜಿಗಳು ಹಾಗೂ ಎಲ್ಲರೂ ಕೂಡ ತಮ್ಮ ಸಾನಿಧ್ಯದಲ್ಲಿ ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ನಿಗಮ ಹಾಗೂ ಕುಲಕಸುಬು ಮತ್ತು ಅನೇಕ ಸಮುದಾಯದ ಬೇಡಿಕೆಗಳ ಬಗ್ಗೆ ಚರ್ಚಿಸಿ ಅಂತಿಮ ಕ್ರಮ ತೆಗೆದುಕೊಳ್ಳುತ್ತೇವೆಂದು ಶ್ರೀಗಳಿಗೆ ಸಚಿವರು ತಿಳಿಸಿದರು.

Related Posts

Leave a Reply

Your email address will not be published.