ಬಿರುವೆರ್ ಕುಡ್ಲ ಪೈವಳಿಕೆ ಘಟಕ ಲೋಕಾರ್ಪಣೆ

ನೂತನವಾಗಿ ಲೋಕಾರ್ಪಣೆಯಾದ ಬಿರುವೆರ್ ಕುಡ್ಲ( ರಿ) ಪೈವಳಿಕೆ ಘಟಕ ಕಾಸರಗೋಡು ಜಿಲ್ಲೆ ಇದರ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭವು ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಯಿಕಟ್ಟೆಯಲ್ಲಿ ಅದ್ದೂರಿಯಾಗಿ ನಡೆಯಿತು. ಇದರ ಸಲುವಾಗಿ ಶ್ರೀ ಮಹಾಗಣಪತಿ ದೇವರಿಗೆ ಗಣಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ (ರಿ ) ಇದರ ಸ್ಥಾಪಕಾಧ್ಯಕ್ಷರಾದ ಉದಯ ಪೂಜಾರಿ ಬಳ್ಳಾಲ್ ಬಾಗ್ ಹಾಗೂ ಮುಖ್ಯ ಅತಿಥಿಗಳನ್ನೊಳಗೊಂಡ ಮೆರವಣಿಗೆಯು ಜೋಡುಕಲ್ಲು ಜಂಕ್ಷನ್ ನಿಂದ ಮಂಗಳೂರಿನ ಖ್ಯಾತ ಹುಲಿವೇಷ, ನಾಸಿಕ್ ಬ್ಯಾಂಡ್,ಚೆಂಡೆ ಕೊಂಬು,ವಾದ್ಯ ಹಾಗೂ ಬೈಕ್ ರಾಲಿಯೊಂದಿಗೆ ಅದ್ದೂರಿಯಾಗಿ ಬಾಯಿಕಟ್ಟೆಯ ಜಂಕ್ಷನ್ ತನಕ ಸಾಗಿ ನಂತರ ಅಯ್ಯಪ್ಪ ಭಜನಾ ಮಂದಿರವನ್ನು ತಲುಪಿತು.

ಈ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ಧ ಸಭಾ ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕಾಧ್ಯಕ್ಷರಾದ ಉದಯ ಪೂಜಾರಿಯವರು ಬಿರುವೆರ್ ಕುಡ್ಲ( ರಿ ಪೈವಳಿಕೆ ಘಟಕದ ಉದ್ಘಾಟನೆಯನ್ನು ನೆರವೇರಿಸಿದರು. ಇದೇ ವೇಳೆ ಮಾತನಾಡಿದ ಅವರು, ಬಿರುವೆರ್ ಕುಡ್ಲ ಸ್ಥಾಪಕ ಉದಯ ಪೂಜಾರಿ ಬಳಲ್ಬಾಗ್ ಬಿರುವೆರ್ ಕುಡ್ಲ ದೇವರ ನಾಡಿಗೆ ಬಂದಿರುವಾಗ ಸಂತೋಷದ ವಿಷಯ ಜನ ಸೇವೆಯನು ಮಾಡಿ ಅದುವೆ ಜನಾರ್ದನ ಸೇವೆ ಎಲ್ಲರೂ ಸೇರಿ ಒಟ್ಟುಗೂಡಿ ಕೆಲಸವನು ಮಾಡಬೇಕು. ನಾರಾಯಣ ಗುರುವಿನ ತತ್ವವನು ಪಾಲಿಸೋಣ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಪೈವಳಿಕೆ ಘಟಕದ ಲೆಕ್ಕಪಾರಿಶೋಧಕರಾದ ಶ್ರೀಧರ್ ಅಮ್ಮೇರಿ ಸ್ವಾಗತಿಸಿ ಕಾಸರಗೋಡು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉದಯ ಕುಮಾರ್ ಅಮ್ಮೇರಿಯವರು ಪ್ರಾಸ್ತವಿಕವಾಗಿ ಮಾತನಾಡಿ ಘಟಕದ ದ್ಯೇಯ ಉದ್ದೇಶಗಳನ್ನು ವಿವರಿಸಿದರು.ಹಾಗೂ ಘಟಕದ ಅಧ್ಯಕ್ಷರಾದ ಗಣೇಶ ಪೂಜಾರಿ ಸ್ಥಾನದಮನೆಯವರು ಅಧ್ಯಕ್ಷ ಭಾಷಣವನ್ನು ಮಾಡಿದರು.ಸಭಾ ಕಾರ್ಯಕ್ರಮದ ನಂತರ ಬಿರುವೆರ್ ಕುಡ್ಲ ಪೈವಳಿಕೆ ಘಟಕದ ಪದಗ್ರಹಣವು ನಡೆಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಜಯಂತ ನಡುಬೈಲು (ಗೌರವಾಧ್ಯಕ್ಷರು, ಶ್ರೀ ಕ್ಷೇತ್ರ ಗೆಜ್ಜೆಗಿರಿ ಪುತ್ತೂರು) , ಶ್ರೀ ಶೀನಪ್ಪ ಪೂಜಾರಿ ಅಲಾರು (ನಿವೃತ್ತ ಸಬ್ ಇನ್ಸ್ಪೆಕ್ಟರ್ ಪೊಲೀಸ್ ಇಲಾಖೆ ಕೇರಳ), ಶ್ರೀ ಚಂದ್ರಶೇಖರ ಅಮೀನ್,(ವಕೀಲರು ಹಾಗೂ ಸಂಘಟನಾ ಕಾರ್ಯದರ್ಶಿ ಬಿರುವೆರ್ ಕುಡ್ಲ ರಿ) ಮಂಗಳೂರು), ಶ್ರೀಮತಿ ವಿದ್ಯಾರಾಕೇಶ್ (ಅಧ್ಯಕ್ಷರು,ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ (ರಿ) ಮಹಿಳಾವೇದಿಕೆ ಮಂಗಳೂರು) ಹಾಗೂ ಶ್ರೀಮತಿ ಸುಮಂಗಲ (ಅಧ್ಯಕ್ಷರು, ಬಿರುವೆರ್ ಕುಡ್ಲ ಮಹಿಳಾವೇದಿಕೆ, ಅಶೋಕನಗರ ಮಂಗಳೂರು)ಇವರು ಭಾಗವಹಿಸಿದರು. ಪೈವಳಿಕೆಯ 8 ತರವಾಡಿನ ಹಿರಿಯರನ್ನು ಗೌರವಿಸಲಾಯಿತು.2 ಸ್ಥಳೀಯ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 3 ಅಶಕ್ತರಿಗೆ ಸಹಾಯನಿಧಿಯನ್ನು ಸಮರ್ಪಸಲಾಯಿತು. ಉದಯ ಪೂಜಾರಿ ಬಳ್ಳಾಲ್ ಬಾಗ್, ವಾಸು ಬಾಯಾರ್ ಹಾಗೂ ರಿತೇಶ್ ಅಂಚನ್ ಕುಲಶೇಖರ್ ಇವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ರಿತೇಶ್ ಅಂಚನ್ ಕುಶೇಖರ್ ಮತ್ತು ಜಯಂತಿ ಕೆ ಪೈವಳಿಕೆ ಕಾರ್ಯಕ್ರಮವನ್ನು ನಿರೂಪಿಸಿ,ಘಟಕದ ಪ್ರಧಾನ ಕಾರ್ಯದರ್ಶಿ ಬಿತೇಶ್ ಕುಮಾರ್ ಕನಿಹಿತ್ತಿಲು ಧನ್ಯವಾದ ಸಮರ್ಪಣೆ ಮಾಡಿದರು. ತದನಂತರ ಮಂಗಳೂರಿನ ಹುಲಿವೇಷ ತಂಡದಿಂದ ಭರ್ಜರಿ ಪಿಲಿನಲಿಕೆ ಕಾರ್ಯಕ್ರಮವು ನಡೆಯಿತು.500ಕ್ಕಿಂತಲೂ ಹೆಚ್ಚಿನ ಸಮಾಜ ಭಾಂದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related Posts

Leave a Reply

Your email address will not be published.