ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರ
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಚುನಾವಣಾ ನಿರ್ವಾಹಣಾ ಸಮಿತಿ ಕಾರ್ಯಾಗಾರವು ನಗರದ ಸುಧೀಂದ್ರ ಸಭಾ ಭವನದ ಹಾಲ್‍ನಲ್ಲಿ ನಡೆಯಿತು.
ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿ ಅವರು, ಜನಸಾಮಾನ್ಯರ ಮಧ್ಯ ಬಿಜೆಪಿ ಪಕ್ಷ ಬಹಳ ಪ್ರಬಲವಾಗಿ ಬೆಳೆದು ಮುಂದಿನ ಅಧಿಕಾರದ ಸೂತ್ರವನ್ನು ಹಿಡಿಯುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಮುಂದಿನ ಚುನಾವಣೆಯಲ್ಲಿ ನಿಶ್ಚಲ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ನಿರ್ವಹಣೆ ಅತ್ಯಂತ ಅಚ್ಚುಕಟ್ಟಿನಿಂದ ಯೋಜನಾಬದ್ಧವಾಗಿ ನಡೆಯಬೇಕು ಎಂದು ಹೇಳಿದರು.
ವಿಧಾನ ಪರಿಷತ್‍ನ ಸದಸ್ಯ ರವಿಕುಮಾರ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಗೆಲ್ಲುತ್ತೇವೆ, ಬಿಜೆಪಿ ಅಂದರೆ ಏನು ಎಂಬುವುದನ್ನು ನಾವು ಸಮಾಜವನ್ನು ಅರ್ಥ ಮಾಡಿಸುವುದರಲ್ಲಿ ಯಶಸ್ವಿಯಾಗುತ್ತಿದ್ದೇವೆ ಎಂದು ಹೇಳಿದರು.
ಆನಂತರ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡುಬಿದರೆ ಮಾತನಾಡಿ, ಅವತ್ತಿನಿಂದ ಇವತ್ತಿನ ವರೆಗೂ ನಮ್ಮ ಸಿದ್ದಾಂತದಲ್ಲಿ ರಾಜಿಮಾಡಿಕೊಂಡಿಲ್ಲ.
ಕಾರ್ಯ ಪದ್ಧತಿ ಮತ್ತು ನಿರಂತರವಾದ ಪರಿಶ್ರಮದಿಂದ ಈ ಮೂರು ಅಂಶಗಳನ್ನು ತನ್ನ ಚಟುವಟಿಕೆಯಲ್ಲಿ ನಿತ್ಯ ನಿರಂತರವಾಗಿ ಅನುಷ್ಠಾನ ಮಾಡಿಕೊಂಡ ಪರಿಣಾಮ ಇವತ್ತು ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಬೆಳೆದುಬಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಭಾ ಪ್ರಭಾರಿ ರಾಜೇಶ್ ಕಾವೇರಿ, ವಿಭಾಗದ ಸಹಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು.