ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮುಖಂಡರು ಉತ್ತರಿಸಲಿ: ಬಿಜೆಪಿ ರಾಜ್ಯ ಘಟಕದ ಪ್ರಧಾನ ವಕ್ತಾರ ಎಂ.ಜಿ. ಮಹೇಶ್ ಸವಾಲು

ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು, ಕಾಂಗ್ರೆಸ್‍ನ 29 ಶಾಸಕರು ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದಾರೆ. ಅವರಲ್ಲಿ 13 ಜನರು ಈಗಾಗಲೇ ಕೆಪಿಸಿಸಿ ಬಿಡುಗಡೆಗೊಳಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಟಿಕೆಟ್ ಪಡೆದಿದ್ದಾರೆ. ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಸ್ಪಷ್ಟನೆ ನೀಡಲಿ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ವಕ್ತಾರ ಎಂ.ಜಿ. ಮಹೇಶ್ ಸವಾಲೆಸೆದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‍ನ 29 ಶಾಸಕರ ಹೆಸರು ಇರುವ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆದ ರಹಸ್ಯ ಚುನಾವಣೆಯಲ್ಲಿ ಸುಮಾರು ಮಂಡಲ, ಘಟಕಗಳ ಪದಾಧಿಕಾರಿಗಳು ಸೇರಿ 3,000 ಜನರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಇದನ್ನು ಪರಿಗಣಿಸಿ ಪಕ್ಷದ ವರಿಷ್ಠರು ಅಭ್ಯರ್ಥಿ ಆಯ್ಕೆ ಮಾಡಲಿದ್ದಾರೆ. ಯಾವ ಶಾಸಕರಿಗೆ ಟಿಕೆಟ್ ಸಿಗಬಹುದು ಅಥವಾ ಇಲ್ಲ ಎಂದು ಈಗಲೇ ಹೇಳುವುದು ಕಷ್ಟ. ಬಿಜೆಪಿಯಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು.

ಮುಖಂಡರಾದ ರತನ್ ರಮೇಶ್, ರವಿಶಂಕರ ಮಿಜಾರ್, ಸಂಜಯ ಪ್ರಭು, ಜಗದೀಶ್ ಶೇಣವ, ಸಂದೇಶ್ ಶೆಟ್ಟಿ, ರಣದೀಪ್ ಕಾಂಚನ್ ಇದ್ದರು.

Related Posts

Leave a Reply

Your email address will not be published.