ಉಡುಪಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು ಬೆಳಗ್ಗೆ ಉಡುಪಿಗೆ ಆಗಮಿಸಿದ್ದು, ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ನಡ್ದಾರನ್ನು ಮಠದ ದಿವಾನ ವರದರಾಜ ಆಚಾರ್ಯ ಮಾಲಾರ್ಪಣೆಗೈದು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಡುಪಿ ಶಾಸಕ ರಘುಪತಿ ಭಟ್, ಮುಖಂಡರಾದ ಪ್ರದೀಪ ರಾವ್, ಸುಪ್ರಸಾದ್ ಶೆಟ್ಟಿ, ಮೊದಲಾದವರು ಜೊತೆಗಿದ್ದರು. ಉಡುಪಿ ಜಿಲ್ಲಾ ಪೆÇಲೀಸ್ ಅಧಿಕ ಅಕ್ಷಯ್ ಹಾಕೆ ಮಚ್ಚಿಂದ್ರ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿತ್ತು.

ಶ್ರೀ ಕೃಷ್ಣ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಪೇಜಾವರ ಮಠಕ್ಕೆ ತೆರಳಲಿರುವ ನಡ್ಡಾ, ಅಷ್ಟ ಮಠಾಧೀಶರು ಹಾಗೂ ಕರಾವಳಿ ಭಾಗದ ವಿವಿಧ ಮಠಾಧೀಶರೊಂದಿಗೆ ಮಾತುಕತೆ ನಡೆಸಲಿರುವರು. ಇದರಲ್ಲಿ ಕರಾವಳಿ ಭಾಗದ ಹತ್ತಕ್ಕೂ ಅಧಿಕ ಮಠಾಧೀಶರು ಭಾಗಿಯಾಗಲಿದ್ದು, ಕರಾವಳಿ ಭಾಗದ ಬೇಡಿಕೆಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
