ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ವತಿಯಿಂದ ಸದಸ್ಯತ್ವ ಅಭಿಯಾನ

ಕರ್ನಾಟಕ ರಾಜ್ಯಾದ್ಯಂತ ನಡೆಯುತ್ತಿರುವ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾದ ಸದಸ್ಯತ್ವ ಅಭಿಯಾನದಲ್ಲಿ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿನ ನಾಗರಿಕರು ಹಾಗೂ ಕೊಡಿಯಾಲ್ ಬೈಲ್ ಪರಿಸರದಲ್ಲಿನ ಕಾಲೇಜುಗಳ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಬಿಜೆಪಿ ಸದಸ್ಯತ್ವ ಪಡೆಯುವ ಮೂಲಕ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ಅಧ್ಯಕ್ಷರಾದ ಸಚಿನ್ ರಾಜ್ ರೈ, ಪ್ರಧಾನ ಕಾರ್ಯದರ್ಶಿಗಳಾದ ಸುಶಾಂತ್, ಜಿತೇಶ್, ಉಪಾಧ್ಯಕ್ಷರುಗಳಾದ ಜಯರಾಜ್,ಘಂಶ್ಯಾಮ್, ಮೌನಿಶ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶಿವು ದೇಶಕೋಡಿ ಕಾರ್ಯದರ್ಶಿಗಳಾದ ದೀಕ್ಷಿತ್, ಚರಣ್, ಸದಸ್ಯರಾದ ಕಾರ್ತಿಕ್, ಯುವ ಮೋರ್ಚಾ ದಕ್ಷಿಣ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಅಂಚನ್, ಪ್ರಣೀತ್ ಹಾಗೂ ಯುವ ಮೋರ್ಚಾದ ಕಾರ್ಯಕರ್ತರು ಉಪಸ್ಥಿತರಿದ್ದರು.