Home Blog Full WidthPage 234

ಸುಳ್ಯ ಎಸ್‌ಐ ಆಗಿ ಈರಯ್ಯ ದೂಂತೂರು ಅಧಿಕಾರ ಸ್ವೀಕಾರ

ಸುಳ್ಯ: ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಸೋಮವಾರ ಈರಯ್ಯ ದೂಂತೂರು ಅವರಿಗೆ ವರ್ಗಾವಣರಗೊಂಡ ಎಸ್‌ಐ ದಿಲೀಪ್ ಜಿ.ಆರ್ ಅಧಿಕಾರ ಹಸ್ತಾಂತರಿಸಿದರು. ಕಳೆದ ಎರಡು ವರ್ಷಗಳಿಂದ ಸುಳ್ಯ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿಲೀಪ್ ಜಿ.ಆರ್. ಅವರಿಗೆ ವರ್ಗಾವಣೆಯಾಗಿದೆ. ಈರಯ್ಯ ದೂಂತೂರು ಅವರನ್ನು ಸುಳ್ಯ

ಅಂಬಲಪಾಡಿ ನೀರಿನ‌ ಸಮಸ್ಯೆ: ಪಂಚಾಯತ್ ಅಧ್ಯಕ್ಷರ ಹೇಳಿಕೆ ವಿರುದ್ಧ ಗ್ರಾಮಸ್ಥರು ಗರಂ

ಉಡುಪಿ: ಉಡುಪಿ ಜಿಲ್ಲೆಯ ಅಂಬಲಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ‌ ಸಮಸ್ಯೆ ತೀವ್ರಗೊಂಡಿದ್ದು ಗ್ರಾಮದ ಮಹಿಳೆಯರು ಪಂಚಾಯತ್ ಗೆ ಮುತ್ತಿಗೆ ಹಾಕಿದ್ದರು. ಅಲ್ಲಿನ 90ಕ್ಕು ಅಧಿಕ ಮನೆಗಳಿಗೆ ನೀರು ಸಿಗದಿರುವ ಪರಿಣಾಮ, ನೀರು ಪೂರೈಕೆ ಮಾಡಬೇಕು ಎಂದು ಕೊಡ ಹಿಡಿದು ಪಂಚಾಯತ್ ಗೆ ಮುತ್ತಿಗೆ ಹಾಕಿದ್ದ ಮಹಿಳೆಯರು ಮತ್ತು ಗ್ರಾಮಸ್ಥರು ತಮ್ಮ ಪ್ರತಿಭಟನೆ ದಾಖಲಿಸಿದ್ದರು. ಆದರೆ ಈ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೋಹಿಣಿ

ಕೇಂದ್ರ ಸರ್ಕಾರದ ವಿರುದ್ಧ ಅನ್ನದ ಬಟ್ಟಲು ಬಡಿದು ಎಚ್ಚರಿಕೆ : ಮಾಜಿ ಸಚಿವ ರಮಾನಾಥ ರೈ

ಬಡವರಿಗೆ ಅಕ್ಕಿ ನೀಡುವ ಯೋಜನೆಗೆ ಅಡ್ಡಿಪಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅನ್ನದ ಬಟ್ಟಲು ಬಡಿಯುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಲಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಡವರ ಅನ್ನಕ್ಕೆ ಕಲ್ಲು ಹಾಕುವವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ದೇಶದಲ್ಲೇ ಬಡವರಿಗೆ ಪ್ರಥಮವಾಗಿ ಉಚಿತವಾಗಿ ಅಕ್ಕಿ ನೀಡಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ

ವಾಮಂಜೂರಿನ ಮಂಗಳಾಜ್ಯೋತಿ ಶಾಲಾ ಮಕ್ಕಳಿಗೆ ಉಚಿತ ಭಗವದ್ಗೀತೆ ಪುಸ್ತಕ ವಿತರಣೆ

ಮೂಡಬೆಟ್ಟು ಕುಳಾಯಿಯ ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನದ ವತಿಯಿಂದ ವಾಮಂಜೂರಿನ ಮಂಗಳಾಜ್ಯೋತಿ ಶಾಲಾ ಮಕ್ಕಳಿಗೆ ಭಗವದ್ಗೀತೆ ಪುಸ್ತಕ ಉಚಿತವಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಇಸ್ಕಾನ್‍ನ ಸಚ್ಚಿದಾನಂದ ಅದೈತದಾಸ ಅವರು ಭಗವದ್ಗೀತ ತರಗತಿ, ಕೀರ್ತನೆ ನಡೆಸಿಕೊಟ್ಟರು. ನಂತರ ಪ್ರಸಾದ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಸುಬೋದ್ ಮಾರ್ತ, ಪ್ರದೀಪ್ ಮೆಂಡನ್, ಮಾಧವ ಭಂಡಾರಿ, ಅಶ್ವಿನ್ ಅವರು ಭಾಗವಹಿಸಿದ್ದರು.

ಗಂಗೊಳ್ಳಿ : ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದ ಜೆಟ್ಟಿ ನಿರ್ಮಾಣ ಕಾರ್ಯ

ಕರಾವಳಿಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿ ಸಂಪೂರ್ಣ ನಿರ್ಲಕ್ಷ್ಯಕ್ಕೊಗಾದ ಸ್ಥಿತಿಗೆ ತಲುಪಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಇಲ್ಲಿನ ಜೆಟ್ಟಿಯ ಒಂದು ಭಾಗ ಕುಸಿದು ಮೀನುಗಾರಿಕೆಗೆ ತೊಂದರೆಯಾಗಿದ್ದರೂ ಜೆಟ್ಟಿಯ ಮರು ನಿರ್ಮಾಣದ ಕಾರ್ಯ ಕನಸಾಗಿಯೇ ಉಳಿದಿದೆ. ಗಂಗೊಳ್ಳಿಯಲ್ಲಿ 2013ರಲ್ಲಿ 10 ಕೋಟಿ ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲಾಗಿತ್ತು. ಇದು 2016ರಲ್ಲಿ ಹಾನಿಗೊಳಗಾಯಿತು. 2018 ರಲ್ಲಿ ದುರಸ್ತಿಗಾಗಿ ಹೆಚ್ಚುವರಿ 3

ಮಂಜೇಶ್ವರ : ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋದ ಡಾಮರು

ಮಂಜೇಶ್ವರ ಗ್ರಾಮ ಪಂಚಾಯತ್‍ನ ಎರಡನೇ ವಾರ್ಡು ವ್ಯಾಪ್ತಿಯಲ್ಲಿರುವ ತೂಮಿನಾಡು ಮಹಾಕಾಳಿ ರಸ್ತೆ, ಕಳಪೆ ಕಾಮಗಾರಿಯಿಂದ ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋಗಿದೆ. ಕಳಪೆ ಮತ್ತು ಅರೆಬರೆ ಕಾಮಗಾರಿ ನಡೆಸಿದ ಗುತ್ತಿಗೆದಾರನ ವಿರುದ್ಧ ವ್ಯಾಪಕ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ಫಂಡ್‍ನಿಂದ 3 ಲಕ್ಷ ರೂ. ಖರ್ಚಿನಲ್ಲಿ ನಿರ್ಮಾಣಗೊಂಡ 120 ಮೀಟರ್ ಅಂತರದ ರಸ್ತೆ ಇದೀಗ ತಿಂಗಳಾಗುವ ಮೊದಲೇ ಕಿತ್ತು ಹೋಗಿದೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ

ಬಂಟರ ಸಂಘಗಳ ವತಿಯಿಂದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಕಾರ್ಯಕ್ರಮವು ಪುತ್ತೂರಿನಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಮಾರ್ಗದರ್ಶನದಲ್ಲಿ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ ಬಂಟರ ಸಂಘ, ಯುವ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘಗಳ ಸಹಯೋಗದೊಂದಿಗೆ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ನಡೆಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಶೋಕ್

ಮೂಡುಬಿದರೆ : ಅಕ್ರಮ ಗೋವು ಸಾಗಾಟ – ಮೂರು ಗೋವುಗಳ ರಕ್ಷಣೆ

ಮೂಡುಬಿದಿರೆ: ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಗೋವುಗಳನ್ನು ಬಜರಂಗದಳದ ಕಾರ್ಯಕರ್ತರು ಮತ್ತು ಮೂಡುಬಿದಿರೆ ಪೊಲೀಸರು ರಕ್ಷಿಸಿದ್ದಾರೆ. ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿ ಜಂಟಿ ಕಾರ್ಯಚರಣೆ ನಡೆಸಿ ಕೆಲ್ಲಪುತ್ತಿಗೆ ಬಳಿಯಿಂದ ಕಾರನ್ನು ಹಿಂಬಾಲಿಸಿಕೊಂಡು ಬಂದು ಜಿ.ಕೆ.ಗಾರ್ಡನ್ ಹಿಡಿದಿದ್ದಾರೆ. ಈ ಸಂದರ್ಭ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.

ಮೂಡುಬಿದಿರೆ: ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಮೂಡುಬಿದಿರೆ: ನಿಟ್ಟೆಯ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಗಾರಿನಲ್ಲಿ ಭಾನುವಾರ ನಡೆದಿದೆ. ಪುರಸಭಾ ವ್ಯಾಪ್ತಿಯ ಅಲಂಗಾರು ಆಶ್ರಯ ಕಾಲನಿಯ ನಿವಾಸಿ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ (೨೧) ಆತ್ಮಹತ್ಯೆ ಮಾಡಿಕೊಂಡಾತ.ಹೆತ್ತವರು ಮನೆಯಲ್ಲಿ ಚನ್ನಾಗಿ ಓದುವಂತೆ ಬುದ್ಧಿಮಾತು ಹೇಳಿದ್ದು, ಅದರಂತೆ ಸಾತ್ವಿಕ್

ಮೆಹೆಂದಿ ಶಾಸ್ತ್ರದಂದು ನಾಪತ್ತೆಯಾಗಿದ್ದ ವರ ಮನೆಗೆ ವಾಪಾಸ್!

ಉಳ್ಳಾಲ: ಮದುವೆ ಮೆಹೆಂದಿಯಂದು ನಾಪತ್ತೆಯಾಗಿದ್ದ ವರ ಮನೆಗೆ ವಾಪಸ್ಸಾಗಿದ್ದಾನೆ. ನಾಪತ್ತೆಯಾದ ಹಲವು ದಿನಗಳ ನಂತರ ಬಳ್ಳಾರಿಯಲ್ಲಿ ಇರುವುದಾಗಿ ಸಹೋದರಿಗೆ ಕರೆ ಮಾಡಿ ತಿಳಿಸಿದ ನಂತರ ಜೂ.16 ರಂದು ಕೊಣಾಜೆ ಠಾಣೆಗೆ ಬಂದು ಮನೆಗೆ ವಾಪಸ್ಸಾಗಿದ್ದಾರೆ.ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ‌ ಐತಪ್ಪ ಶೆಟ್ಟಿ ಎಂಬವರ ಪುತ್ರ ಕಿಶನ್ ಶೆಟ್ಟಿ ಮೇ 31ರಂದು ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲು ತೆರಳಿದ್ದವರು ನಾಪತ್ತೆಯಾಗಿದ್ದರು. ಇದರಿಂದಾಗಿ ನಿಗದಿಯಾಗಿದ್ದ ಮದುವೆಯೂ