Home Blog Full WidthPage 3

ಪಡುಬಿದ್ರಿ: ಕೃಷಿ ಬದುಕು ಹತ್ತಿರವಾಗಲು ಇಂಥಹ ಕೃಷಿ ಮೇಳಗಳು ಪೂರಕ: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಬದುಕಿನ ಬಂಡಿ ಸಾಗಿಸುವ ನಿಟ್ಟಿನಲ್ಲಿ ಜೊಳಿಗೆ ಹಾಕಿಕೊಂಡು ಉದ್ಯೋಗ ಹರಸಿ ಹೊರ ದೇಶ ಹೊರ ರಾಜ್ಯಕ್ಕೆ ವಲಸೆ ಹೋದವರು ಅದೆಷ್ಟೋ ಮಂದಿ… ಆದರೆ ಕೊರೋನ ಎಂಬ ರೋಗ ನಮ್ಮನ್ನು ತಾತ್ಕಾಲಿಕವಾಗಿ ಹತ್ತಿರ ತಂದರೂ ಮತ್ತೆ ಅದೇ ಸ್ಥಿತಿ, ಇದೀಗ ಇಂಥಹ ಕೃಷಿ ಮೇಳಗಳನ್ನು ಆಯೋಜಿಸುವ ಮೂಲಕ ಕೃಷಿ ಬದುಕು ಮತ್ತೆ ಹತ್ತಿರವಾಗಲು ಸಾಧ್ಯ ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ರಾಜಸ್ತಾನ – ಹಾಸ್ಟೆಲ್ಲಿನ ಹುಡುಗಿಯರನ್ನು ನೋಡಲು ಬಂದ ಚಿರತೆ

ಶನಿವಾರ ಬೆಳ್ಳಂಬೆಳಿಗ್ಗೆ ಉದಯಪುರದ ಬಾಲಕಿಯರ ಹಾಸ್ಟೆಲ್ಲಿಗೆ ಚಿರತೆಯೊಂದು ಮೆಲ್ಲನೆ ಬಂದು ಅಲ್ಲಿದ್ದ ಎಲ್ಲರೂ ಗಡಗಡ ನಡುಗುವಂತೆ ಮಾಡಿತು.ರಾಜಸ್ತಾನದ ಉದಯಪುರದಲ್ಲಿ ಈ ಚಿರತೆ ಇಣುಕುವಿಕೆ ನೋಡುತ್ತಲೇ ಹುಡುಗಿಯರು ಮತ್ತು ವಾರ್ಡನ್ ಎಲ್ಲರೂ ಬಾಗಿಲು ಹಾಕಿಕೊಂಡು ಒಳಗೆ ಕುಳಿತುಕೊಂಡರು. ಭಯದಿಂದ ಹೊರಗೆ ಇಣುಕಿ ನೋಡುತ್ತಲಿದ್ದರು. ಒಂದು ಸುತ್ತು ಆಚೀಚೆ ಹಾಕಿದ ಚಿರತೆಯು ಮೆಲ್ಲನೆ ಬೆಳಗಾಗುವಾಗ ಬಂದ ದಾರಿಯಲ್ಲಿಯೇ ಹಿಂದಕ್ಕೆ ಹೋಯಿತು

ಬೆಂಗಳೂರು : ಹಿರಿಯ ನಟಿ ಲೀಲಾವತಿ ವಿಧಿವಶ

ಕಳೆದ ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಖ್ಯಾತ ಹಿರಿಯ ನಟಿ ಲೀಲಾವತಿ ಬೆಂಗಳೂರಿನ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ನೆಲಮಂಗಲದ ಸೋಲದೇವನ ಹಳ್ಳಿಯ ನಿವಾಸದಲ್ಲೇ ಅವರಿಗೆ ಆರೈಕೆ ಮಾಡಲಾಗುತ್ತಿತ್ತು. ಪುತ್ರ ವಿನೋದ್ ರಾಜ್ ಅವರು ನೋಡಿ ಕೊಳ್ಳುತ್ತಿದ್ದರು. ದಕ್ಷಿಣ ಕನ್ನಡ ದ ಬೆಳ್ತಂಗಡಿ ಮೂಲದ ಲೀಲಾವತಿ ಅವರು, ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ

ಪುತ್ತೂರು : ಅಪಹರಣಕ್ಕೊಳಗಾದ ಯುವಕ ಕೊಲೆ ಶಂಕೆ

ಪುತ್ತೂರಿನಲ್ಲಿ ನಡೆದ ಯುವಕ ಹನುಮಂತ ಅಪಹರಣ ಪ್ರಕರಣದ ಬಗ್ಗೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ.ಪುತ್ತೂರಿನ ಕುಂಬ್ರ ಎಂಬಲ್ಲಿ ಜೆಸಿಬಿ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ನಿವಾಸಿ ಹನುಮಂತ (25) ಅವರನ್ನು ಮೂವರು ಅಪಹರಿಸಿ ಕೊಲೆ ಮಾಡಿ ಮೃತ ದೇಹವನ್ನು ಆಗುಂಬೆ ಘಾಟ್ ನಲ್ಲಿ ಎಸೆದಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ಬಗ್ಗೆ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಅಲ್ಲದೆ ಮೃತ ದೇಹ ಎಸೆದಿರುವುದಾಗಿ ಹೇಳಲಾದ ಆಗುಂಬೆ

ಉತ್ತರ ಕನ್ನಡ: ಶಿರಸಿಯಲ್ಲಿ ಭೀಕರ ರಸ್ತೆ ಅಪಘಾತ ; ಮಂಗಳೂರಿನ ಕಂದಾವರ ಮೂಲದ ನಾಲ್ವರ ದುರ್ಮರಣ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಬಂಡಲ ಗ್ರಾಮದಲ್ಲಿ ಶುಕ್ರವಾರ ಕಾರು ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಕುಮಟಾದಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು

ಖಾಸಗಿ ಬಸ್‍ಗಳಲ್ಲಿ ಕನ್ನಡ ನಾಮಫಲಕ ಬಳಕೆಗೆ ವಿರೋಧ

ಉಡುಪಿ ಮತ್ತು ಮಣಿಪಾಲದಲ್ಲಿ ಸಂಚರಿಸುವ ಬಸ್‍ಗಳಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವುದನ್ನು ಪ್ರಾದೇಶಿಕ ಸಾರಿಗೆ ಕಚೇರಿ ಕಡ್ಡಾಯಗೊಳಿಸಿದೆ.ಇತ್ತೀಚೆಗೆ ನಡೆದ ಜನಸ್ಪಂದನ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಿರುವ ಇಂಗ್ಲಿಷ್ ನಾಮಫಲಕಗಳ ಜೊತೆಗೆ ಕನ್ನಡದಲ್ಲಿ ಮಾರ್ಗ ಸಂಖ್ಯೆಗಳು ಮತ್ತು ಗಮ್ಯಸ್ಥಾನವನ್ನು ನಾಮಫಲಕಗಳಲ್ಲಿ ಪ್ರದರ್ಶಿಸುವಂತೆ ಆರ್‍ಟಿಒ ಎಲ್ಲಾ ಬಸ್ ನಿರ್ವಾಹಕರಿಗೆ ಸೂಚಿಸಿದೆ. ಗಡುವು ಮುಗಿದ ನಂತರ ಬಸ್ ನಿರ್ವಾಹಕರು

ದೆಹಲಿ: ಶೋಭಾ ಕರಂದ್ಲಾಜೆಗೆ ಹೆಚ್ಚುವರಿ ಮಂತ್ರಿಗಿರಿ

ವಿಧಾನ ಸಭೆಗೆ ಆಯ್ಕೆಯಾದ ಕಾರಣ ರಾಜೀನಾಮೆ ನೀಡಿದ ಕೇಂದ್ರ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದಸಿಂಗ್ ಪಟೇಲ್, ರೇಣುಕಾ ಸಿಂಗ್ ಅವರು ಹೊಂದಿದ್ದ ಸಚಿವ ಖಾತೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೆಚ್ಚುವರಿಯಾಗಿ ನಾಲ್ವರು ಮಂತ್ರಿಗಳಿಗೆ ಹಂಚಿದ್ದಕ್ಕೆ ಅಂಕಿತ ಹಾಕಿದರು. ಮಂತ್ರಿ ಅರ್ಜುನ್ ಮುಂಡಾರಿಗೆ ಹೆಚ್ಚುವರಿಯಾಗಿ ಕೃಷಿ ಮತ್ತು ರೈತರ ಕಲ್ಯಾಣ, ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಹೆಚ್ಚುವರಿಯಾಗಿ ಆಹಾರ ಸಂಸ್ಕರಣಾ ಉದ್ಯಮಗಳು, ಸಚಿವ ರಾಜೀವ

ಬಂಟ್ವಾಳ: ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ ಹತ್ಯೆಗೆ ಸಂಚು.!

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿಯಲ್ಲಾದ ಭ್ರಷ್ಟಾಚಾರವನ್ನು ಬಯಲು ಮಾಡಿದ ದ್ವೇಷದಲ್ಲಿ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ್ ವಾಮದಪದವು ಅವರ ಹತ್ಯೆಗೆ ಸಂಚು ನಡೆಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪದ್ಮನಾಭ ಸಾಮಂತ್ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. 2018-2023 ನೇ ಸಾಲಿನಲ್ಲಿ ನಡೆದ ಬಂಟ್ವಾಳ ತಾಲೂಕಿನ ಅಕ್ರಮ-ಸಕ್ರಮದ ಭೂ ಮಂಜೂರಾತಿಗಳ ಭ್ರಷ್ಟಾಚಾರವನ್ನು ಪದ್ಮನಾಭ ಸಾಮಂತ ಬಯಲು

ಹೊನ್ನೆ ಎಣ್ಣೆಗೂ ಪೆಟ್ರೋಲು ಬದಲಿ ಭಾಗ್ಯ

ನಮ್ಮ ತುಳು ಹಿರಿಯರು ಸೀಮೆ ಎಣ್ಣೆ ಬರುವುದಕ್ಕೆ ಮೊದಲು ದೀಪಕ್ಕೆ ಹೊನ್ನೆ ಎಣ್ಣೆ ಇತ್ಯಾದಿ ಉಪಯೋಗಿಸುತ್ತಿದ್ದರು.ಇದನ್ನು ಗಾಯ, ಸುಟ್ಟ ಗಾಯದ ಸಹಿತ ಚರ್ಮದ ಎಲ್ಲ ತೊಂದರೆಗಳಿಗೆ ಬಳಸುತ್ತಿದ್ದರು. ತುಳುವರು ಇದರ ಎಣ್ಣೆ ಅಡುಗೆಗೆ ಬಳಸದಿದ್ದರೂ ಇದರ ಎಲೆಯಲ್ಲಿ ಅಡ್ಯೆ, ಗೊಡ್ಡು ಬೇಯಿಸುತ್ತಿದ್ದರು. ಇದು ನಿತ್ಯಹಸಿರು ಮರವಾಗಿದ್ದು ಕೊಂಗಣ ಏಶಿಯಾದ ಕರಾವಳಿಯಲ್ಲೆಲ್ಲ ಬೆಳೆಯುತ್ತದೆ. ಇದು ಕ್ಯಾಲೋಪಿಲುಮ್ ಇನೋಪಿಲುಮ್ ಲಿನ್ ಎಂಬ ವೈಜ್ಞಾನಿಕ ವಿಭಾಗದ್ದಾಗಿದೆ.ಈಗ

ಬೆಂಗಳೂರು ; ಆನ್‍ಲೈನ್‍ನಲ್ಲಿ ಮಹಿಳೆಗೆ 80,000 ರೂಪಾಯಿ ಟೋಪಿ

ಬೆಂಗಳೂರಿನ ಮಹಿಳೆ ಒಬ್ಬರಿಗೆ ವಿಶೇಷ ಪೂಜೆ ಸಲ್ಲಿಸುವುದಾಗಿ ಆನ್‍ಲೈನ್ ಮೂಲಕ ವಂಚಿಸಿರುವ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ವಿಶೇಷ ಪೂಜೆಗೆ ಹುಡುಕುವಾಗ ಆನ್‍ಲೈನ್‍ನಲ್ಲಿ ಶರಣ್ ಭಟ್ ಎಂಬ ಪೂಜಾರಿಯ ಫೋನ್ ನಂಬರ್ ಯಾರೋ ಕೊಟ್ಟರು. ನನ್ನ ಖಾತೆಗೆ 50,000 ರೂಪಾಯಿ ಹಾಕಿ. ದೇವರ ಮುಂದೆ ಪೂಜೆ ಸಲ್ಲಿಸಿ ಮನೆಗೆ ಬಂದು ವಿಶೇಷ ಪೂಜೆ ಮಾಡುವೆ ಎಂದು ಶರಣ್ ಭಟ್ ತಿಳಿಸಿದಂತೆ ಹಣ