Home Blog Left SidebarPage 3

ಕೊಂಡೆವೂರಿನಲ್ಲಿ ಲೋಕಕ್ಷೇಮಕ್ಕಾಗಿ ನವಗ್ರಹ ಯಾಗ ಮತ್ತು ಪ್ರತಿಷ್ಠೆ

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಲೋಕಕ್ಷೇಮಕ್ಕಾಗಿ ಅತ್ಯಪೂರ್ವವಾದ ‘ನವಗ್ರಹ ಪ್ರತಿಷ್ಠೆ’ ಹಾಗೂ ‘ಅಷ್ಟೋತ್ತರ ಸಹಸ್ರ ನವಗ್ರಹ ಯಾಗ’ಗಳು ಸಹಸ್ರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿAದ ನಡೆಯಿತು. ಉಡುಪಿಯ ಅದಮಾರು ಮಠದ ಪರಮ ಪೂಜ್ಯ ಶ್ರೀ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದಂಗಳವರು ತಮ್ಮ ಆಶೀರ್ವಚನದಲ್ಲಿ “ಇಡೀ ದೇಶಕ್ಕೆ ಯಾಗದ ಮೂಲಕ

ಅಡಿಕೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕುಳ್ಳಂಪ್ಪಾಡಿ ಹಿರಿಯಣ್ಣ ಎಂಬವರ ಕೊಟ್ಟಿಗೆಯಲ್ಲಿ ಸುಲಿದು ದಾಸ್ತಾನು ಇರಿಸಿದ ಅಡಿಕೆ ಗೋಣಿ ಚೀಲಗಳ ಪೈಕಿ 5 ಗೋಣಿ ಚೀಲ ಅಡಿಕೆಯನ್ನು ದಿನಾಂಕ 14.03.2024 ರಂದು ಸಂಜೆ 7:00 ಗಂಟೆಯಿಂದ ದಿನಾಂಕ 15.03.2024 ರಂದು ಬಳಿಗ್ಗೆ 6:00 ಗಂಟೆಯ ಮಧ್ಯೆ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿದ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣಾ ಅ.ಕ್ರ 30-2024 ಕಲಂ 380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ

ಉಳ್ಳಾಲ: ನಾಟೆಕಲ್ ಬೈಕ್ ಅಪಘಾತ – ಬೈಕ್‌ನಲ್ಲಿದ್ದ ಇಬ್ಬರು ಮೃತ್ಯು

ಉಳ್ಳಾಲ: ಮಂಜನಾಡಿ ನಾಟೆಕಲ್ ಸಮೀಪ ನಿನ್ನೆ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಿಂಬದಿ ಸವಾರಳಾಗಿದ್ದ ಹಳೆಯಂಗಡಿ ತೋಕೂರು ಬಳಿಯ ನಿವಾಸಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಚಲಾಯಿಸುತ್ತಿದ್ದ ಯುವಕ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಬೋಂದೇಲ್ ನಿವಾಸಿ ದೀಕ್ಷಿತ್ ಎಂಬವರ ಪತ್ನಿ ಹಳೆಯಂಗಡಿ ತೋಕೂರು ಬಸ್ ನಿಲ್ದಾಣ ಬಳಿಯ ನಿವಾಸಿ ಶ್ರೀ ನಿಧಿ (29) ನಿನ್ನೆ ಸಾವನ್ನಪ್ಪಿದ್ದು

ಬಣ್ಣವು ತೋರುವ ಧರ್ಮಸೆರೆ

ಎಲೆ ಭಾನುವಾರ ದಾಟಿದ್ದೇವೆ, ಬಣ್ಣದ ಅಲೆಯ ಹೋಳಿ ಗಮನಿಸುತ್ತಿದ್ದೇವೆ. ಪಾಮ್ ಸಂಡೇ ಎಂಬುದು ಕ್ರಿಶ್ಚಿಯನರ ಆಚರಣೆಗಳಲ್ಲಿ ಒಂದು. ಪಾಮ್ ಎಂದರೆ ತಾಳೆ. ನಮ್ಮ ತೆಂಗು ಕಂಗಿನ ಸಮೇತ ಜಗತ್ತಿನಲ್ಲಿ 2,600 ಜಾತಿಯ ತಾಳೆ ಜಾತಿಯ ಮರಗಳು ಇವೆ. ಅತಿ ದೊಡ್ಡ ಕಾಯಿಯ ಡಬಲ್ ಕೋಕನಟ್ ಎಂಬುದು ಸಿಶೆಲಸ್ ದ್ವೀಪದಲ್ಲಿ ಮಾತ್ರ ಬೆಳೆಯುತ್ತದೆ. ಇದನ್ನು ಅದರ ಆಕಾರದಿಂದಾಗಿ ಲವ್ ಇಲ್ಲವೇ ಪ್ರೇಮದ ತೆಂಗು ಎನ್ನುತ್ತಾರೆ. ಪ್ರೇಮದ ತೆಂಗು ಎಂದ ಮೇಲೆ ಅದು ನೇರವಾಗಿ ಕಾಮನ ಹಬ್ಬದ ಹೋಳಿಗೆ

“ಬಾಲವಿಕಾಸದಲ್ಲಿ ಲಿಟ್ಲ್ ಪರ್ಲ್ಸ್ ಫೆಸ್ಟ್ – 2023-24”

ವಿಟ್ಲ :ಮಾರ್ಚ್ 23: ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನರ್ಸರಿ ತರಗತಿಯ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ‘ಲಿಟ್ಲ್ ಪರ್ಲ್ಸ್ ಫೆಸ್ಟ್- 2023-24 ಜರುಗಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ , ” ಮಾಣಿಯಂತಹ ಗ್ರಾಮೀಣ ಪ್ರದೇಶ ದಲ್ಲಿ ಕಡಿಮೆ ಖರ್ಚಿನಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ

ಬಣ್ಣಗಳ ಹಬ್ಬ ಹೋಳಿ

ಚಳಿಗಾಲ ಮುಗಿದು ವಸಂತ ಕಾಲ ಕಾಲಿಡುವ ಸಮಯದಲ್ಲಿ ಬರುವ ಬಣ್ಣಗಳ ಹಬ್ಬ ಹೋಳಿ. ಗಂಡು, ಹೆಣ್ಣು, ಮಕ್ಕಳು, ಮುದುಕರು, ಬಡವ ಬಲ್ಲಿದ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಬಾವವಿಲ್ಲದೆ ಪರಸ್ಪರ ಬಣ್ಣದ ಓಕುಳಿಯನ್ನು ಎರಚಿಕೊಂಡು ಮನರಂಜನೆಯ ಉತ್ತುಂಗಕ್ಕೇರಿ, ದ್ವೇಷ, ಕ್ರೋಧ, ಮದ ಮತ್ಸರಗಳಿಗೆ ಇತಿಶ್ರಿ ಹಾಡಿ ಪ್ರೀತಿ ಪ್ರೇಮ, ಮಮತೆ, ಗೌರವದಿಂದ ಎಲ್ಲವನ್ನು ಮರೆತು ಸ್ನೇಹ ಹಸ್ತ ಚಾಚುವ ಒಂದು ವಿಶಿಷ್ಠ ಹಬ್ಬವೇ ಹೋಳಿ. ಹೆಚ್ಚಾಗಿ ಉತ್ತರ ಭಾರತದಲ್ಲಿ ಸಂಭ್ರಮಿಸುವ ಈ

ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿ ಇದು: ರವಿಶಂಕರ ಮಿಜಾರು

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಮನ್ಸೂರ್ ಆಲಿ ಅವರು 25 ಲಕ್ಷ ರೂ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವುದು ರಾಜ್ಯದ ಕಾಂಗ್ರೆಸ್ ಸರಕಾರ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ಜ್ವಲಂತ ಸಾಕ್ಷಿ ಎಂದು ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು ಹೇಳಿದ್ದಾರೆ. ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಚಗುಳಿತನ,

ಮುದ್ದಣ ಸಾಹಿತ್ಯೋತ್ಸವ-2024:  ಪ್ರಶಸ್ತಿ ಪ್ರದಾನ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವತಿಯಿಂದ ಕಾಂತಾವರ ಕನ್ನಡ ಭವನದಲ್ಲಿ ಮುದ್ದಣ ಸಾಹಿತೋತ್ಸವ ವಿವಿಧ ಸಾಹಿತ್ಯ ಚಟುವಟಿಕೆಗಳೊಂದಿಗೆ ನಡೆಯಿತು.   ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2023ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಕವಿ ಡಾ.ಲಕ್ಷ್ಮಣ. ವಿ.ಎ.ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಾಗೂ ಅವರ ಪ್ರಶಸ್ತಿ ಪುರಸ್ಕೃತ ಕೃತಿ

ಮಾರ್ಚ್ 25ರಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಒಟ್ಟು 2,750 ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾರ್ಚ್‌ 25ರಿಂದ ಏಪ್ರಿಲ್‌ 6ರವರೆಗೆ ನಡೆಯಲಿದೆ. ಹೀಗಾಗಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಭದ್ರತೆ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ

ರಾಜಕೀಯ ಶುದ್ಧೀಕರಣಕ್ಕೆ ಬರುವುದಾದರೆ ಎಲ್ಲರಿಗೂ ಸ್ವಾಗತ: ಡಿವಿಎಸ್

ರಾಜಕೀಯ ಶುದ್ಧೀಕರಣದ ಬಗ್ಗೆ ಸ್ವಂತ ತೀರ್ಮಾನ ತೆಗೆದುಕೊಳ್ಳಲು ನನ್ನಿಂದ ಸಾಧ್ಯ, ಆದರೆ, ಸಮಾನ ಮನಸ್ಕರಾಗಿ ನನ್ನೊಂದಿಗೆ ಕೈಜೋಡಿಸಲು ಯಾರಾದರೂ ಬರುವುದಾದರೆ ಎಲ್ಲರಿಗೂ ಸ್ವಾಗತ ಎಂದು ಸಂಸದ, ಮಾಜಿ ಸಿಎಂ ಡಿ. ವಿ. ಸದಾನಂದ ಗೌಡ ಹೇಳಿದರು. ಅವರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುಂಪುಗಾರಿಕೆಗಳಿದ್ದವು. ದೆಹಲಿ ಬಣ ಹಾಗೂ ಕರ್ನಾಟಕ