Home Blog Left SidebarPage 457

ನ.28 ರಂದು ಎಸ್.ಡಿ.ಎಂ ಓರಿಯೆಂಟೇಶನ್ ಕಾರ್ಯಕ್ರಮ

ಉಜಿರೆ, ನ. 22: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣ ಕ ವರ್ಷದ ಕಾರ್ಯಚಟುವಟಿಕೆಗಳು ನವೆಂಬರ್ 28ರಂದು ಎಸ್‍ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿತವಾದ ಓರಿಯೆಂಟೇಶನ್ ಕಾರ್ಯಕ್ರಮದ ಮೂಲಕ ವಿದ್ಯುಕ್ತವಾಗಿ ಚಾಲನೆ ಕಾಣಲಿವೆ. ಈ ಕಾರ್ಯಕ್ರಮಕ್ಕೆ ಕೇಂದ್ರದ ವಿವಿಧ ಸ್ನಾತಕೋತ್ತರ ವಿಭಾಗಗಳಿಗೆ

ವಾಮದಪದವು : ಮಕ್ಕಳಿಗೆ, ಯುವಕರಿಗೆ ಅಡಿಕೆ ಸಿಪ್ಪೆ ಸುಲಿಯುವ ತರಬೇತಿ

ಕೃಷಿ ಕಸುಬುಗಳ ಕೌಶಲ್ಯವನ್ನು ಕಲಿಯುವ ಮೂಲಕ ಗ್ರಾಮೀಣ ಭಾಗದ ಯುವಜನತೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎನ್ನುವ ಸದುದ್ಧೇಶದಿಂದ ಅಡಿಕೆ ಸಿಪ್ಪೆ ಸುಲಿಯುವ ವಿನೂತನ ತರಬೇತಿ ಕಾರ್ಯಕ್ರಮವೊಂದು ವಾಮದಪದವು ಸಮೀಪದ ಮಾವಿನಕಟ್ಟೆಯಲ್ಲಿ ನಡೆಯಿತು. ಹಲವು ವರ್ಷದಿಂದ ಪಕ್ಷಿಗಳ ಸಂರಕ್ಷಣೆಗಾಗಿ ಜಾಗೃತಿ ಅಭಿಯಾನವನ್ನು ನಡೆಸಿಕೊಂಡು ಬಂದಿರುವ ಗುಬ್ಬಚ್ಚಿ ಗೂಡು ಬಳಗ ಈ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು ಕೃಷಿಕರ ಮೆಚ್ಚುಗೆಗೆ

ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಬೆಂಕಿಗೆ ಸುಟ್ಟು ಕರಕಲಾದ ಕಾರು

ಮಂಗಳೂರು: ಕಾರೊಂದು ಹೊತ್ತಿ ಉರಿದ ಘಟನೆ ನಗರದ ಜ್ಯೋತಿ ಬಳಿ ನಡೆದಿದೆ. ಇಂದು ಮಧ್ಯಾಹ್ನ ಜ್ಯೋತಿ ಬಳಿಯ ಜ್ಯೂಸ್ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಬೆಂಕಿ ಯಾವ ಕಾರಣಕ್ಕೆ ತಗುಲಿತ್ತು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.

ಕದ್ರಿ ದೇವಸ್ಥಾನದಿಂದ ಭದ್ರತೆಗಾಗಿ ಮನವಿ 

ಮಂಗಳೂರು: ನಗರದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿಗೆ ಕದ್ರಿ ದೇವಸ್ಥಾನದಲ್ಲಿ ಸ್ಪೋಟಿಸುವ ಗುರಿ ಇತ್ತು ಎಂಬ ವಿಚಾರ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ದ ಕದ್ರಿ ಮಂಜುನಾಥ ದೇವಳದ ಆಡಳಿತ ಪೊಲೀಸ್ ಇಲಾಖೆಗೆ ಭದ್ರತೆಗಾಗಿ ಮನವಿ ಮಾಡಿದೆ. ಕದ್ರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಅವರು ತನ್ನ ವ್ಯಾಪ್ತಿಯ ಕದ್ರಿ ಪೊಲೀಸ್ ಠಾಣೆಗೆ ಲಿಖಿತ ದೂರೊಂದನ್ನು ನೀಡಿದ್ದಾರೆ ಜೊತೆಗೆ ಭದ್ರತೆ ಒದಗಿಸಲು ಮನವಿ

ಹೊಯಿಗೆ ಫ್ರೆಂಡ್ಸ್ ಪಲಿಮಾರು ; ಹಾವು ನಾವು ಮತ್ತು ಪರಿಸರ ವಿಷಯದ ಕುರಿತು ಜಾಗೃತಿ

ಹೊಯಿಗೆ ಫ್ರೆಂಡ್ಸ್ (ರಿ) ಪಲಿಮಾರು” ಸಂಸ್ಥೆಯ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ, ಖ್ಯಾತ ಉರಗ ತಜ್ಞ ಶ್ರೀ ಗುರುರಾಜ್ ಸನಿಲ್ ಉಡುಪಿ ಇವರಿಂದ, ‘ಹಾವು ನಾವು ಮತ್ತು ಪರಿಸರ’ ಎಂಬ ವಿಷಯದ ಕುರಿತು ಜಾಗ್ರತಿ ಮೂಡಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಜೀವಂತ ಹಾವುಗಳನ್ನು ತಂದು,ಅವುಗಳ ಪರಿಚಯವನ್ನು ಮಾಡಿಸಿದರು. ಹಾವುಗಳು ಕಾರಣವಿಲ್ಲದೆ ಯಾರಿಗೂ ಕಚ್ಚುವುದಿಲ್ಲ ವಿದ್ಯಾರ್ಥಿಗಳು ಹಾವುಗಳನ್ನು ಕಂಡು

ಮುಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ನಾಮಫಲಕ ಉದ್ಘಾಟನೆ

ಬಂಟ ಸಮಾಜದ ಸಂಘಟನೆಯ ಮೂಲಕ ಇತರ ಸಮಾಜದ ವರ್ಗಕ್ಕೂ ಮುಕ್ತ ನೆರವು ನೀಡುವ ಮೂಲಕ ಸಮಾಜದಲ್ಲಿ ಮೇಲ್ಪಂಕ್ತಿಗೆ ಕಾರಣವಾಗಿರುವ ಒಕ್ಕೂಟಕ್ಕೆ ಸಮಾಜ ಬಾಂಧವರಿಂದ ನೀಡುತ್ತಿರುವ ಸ್ಪಂದನೆಯೇ ಮೂಲ ಕಾರಣವಾಗಿದೆ. ಸಮಾಜದಲ್ಲಿ ಎಲ್ಲಾ ಸಮಾಜದ ಸಂಘಟನೆಯೂ ಇದೇ ರೀತಿಯ ಯೋಚನೆಯಲ್ಲಿ ಯೋಜನೆ ರೂಪಿಸಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಅವರು ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಡುಬೈಲ್ ನಲ್ಲಿ ಜಾಗತಿಕ ಬಂಟರ ಸಂಘಗಳ

ಇರುವೈಲ್‍ನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ : 35 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ

ಮೂಡುಬಿದಿರೆ: ದ.ಕ ಜಿಲ್ಲಾಡಳಿತ , ದ.ಕ. ಜಿ.ಪಂ ವತಿಯಿಂದ ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಡೀಮ್ಡ್ ಫಾರೆಸ್ಟ್, ಹಾಗೂ ಖಾಸಗಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ 35 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಸರ್ಕಾರದ ಮಟ್ಟದಲ್ಲಿ ಪರಿಹರಿಸಬಹುದಾದ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು.

ಪಡುಬಿದ್ರಿ :ಉಪ್ಪಿನಕಾಯಿ ಬಾಟಲಿ ಒಳಗಡೆ ಹಲ್ಲಿ ಪತ್ತೆ

ಪಡುಬಿದ್ರಿ ಬೀಡು ಬಳಿಯ ನಿವಾಸಿ ಉಮೇಶ್ ಪೂಜಾರಿ ಎಂಬವರು ಮುಲ್ಕಿ ಕಾರ್ನಾಡಿನ ಅಂಗಡಿಯೊಂದರಲ್ಲಿ ಕರೀದಿ ಮಾಡಿದ ಉಪ್ಪಿನ ಕಾಯಿ ಬಾಟಲ್ ಒಳಗಡೆ ಸತ್ತ ಹಲ್ಲಿ ಪತ್ತೆಯಾಗಿ ಕೆಲ ಕ್ಷಣ ಮನೆಮಂದಿ ಆತಂಕ ಪಟ್ಟಿದ್ದಾರೆ.

ವಿಶ್ವದಲ್ಲಿ ಅತಿ ದೊಡ್ಡ ಮೂತ್ರಕೋಶದ ಕಲ್ಲು ಪತ್ತೆ

ಮಣಿಪಾಲ, 25ನೇ ನವೆಂಬರ್ 2022: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿನ ಮೂತ್ರಶಾಸ್ತ್ರಜ್ಞರ ತಂಡವು ಅತಿದೊಡ್ಡ ಮೂತ್ರಕೋಶದ ಕಲ್ಲು ಯಶಸ್ವಿಯಾಗಿ ತೆಗೆದುಹಾಕಿದೆ. 60 ವರ್ಷ ವಯಸ್ಸಿನ ಮಹಿಳೆ ಕಳೆದ ಆರು ವರ್ಷಗಳಿಂದ ಉರಿ ಮೂತ್ರ ದೂರುಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಈ ರೋಗಲಕ್ಷಣಗಳ ಪ್ರತಿ ಭೇಟಿಯಲ್ಲಿ ಮೂತ್ರನಾಳದ ಸೋಂಕಿಗೆ ಪ್ರಾಯೋಗಿಕವಾಗಿ ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ

ಬಂಟ್ವಾಳ : ಉದಯೋನ್ಮುಖ ಚಿತ್ರಕಲಾವಿದ ಶಶಾಂಕ್

ಬಂಟ್ವಾಳ: ಕಲಾವಿದರಿಗೆ ಸೂಕ್ತ ಅವಕಾಶ ಹಾಗೂ ಪ್ರೊತ್ಸಾಹಗಳು ಸಿಕ್ಕಾಗ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಿದೆ. ಬಂಟ್ವಾಳದ ಉದಯೋನ್ಮುಖ ಚಿತ್ರಕಲಾವಿದನೋರ್ವನಿಗೆ ಆತನ ಚಿತ್ರಕಲಾ ಶಿಕ್ಷಕರು ನೀಡಿದ ಪ್ರೋತ್ಸಾಹ ಹಾಗೂ ಹಿತೈಷಿಗಳು ನೀಡಿದ ಅವಕಾಶದಿಂದ ಇಂದು ಯಶಸ್ವಿ ಚಿತ್ರಕಲಾಕಾರನಾಗಿ ಮೂಡಿ ಬರುತಿದ್ದಾನೆ. ತಾಲೂಕಿನ ಪಾಣಮಂಗಳೂರಿನಲ್ಲಿರುವ ನವರಂಗ್ ಸ್ಮರಣಿಕ ಕೇಂದ್ರ ಹಾಗೂ ಅಲ್ಲೇ ಪಕ್ಕದಲ್ಲಿರುವ ಪೋನಸ್ ಹಲಸಿನ ಅಂಗಡಿಗೆ ಭೇಟಿ ನೀಡಿದಾಗ ಅದರ ಗೋಡೆಗಳಲ್ಲಿ