ಬ್ರಹ್ಮಾವರ: ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ಎಲೆವೆಂಶಿಯಾ 2ಕೆ24 ಫೆಸ್ಟ್
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಎಂಬ ಫೆಸ್ಟ್ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಲಕ್ಷ್ಮೀ ಶೆಟ್ಟಿ ಎಚ್ .ಆರ್ ರೋಬೊಸಾಫ್ಟ್ ಉಡುಪಿ ಮತ್ತು ಸಮಾಜ ಸೇವಕ ಈಶ್ವರ್ ಮಲ್ಪೆ ಇವರು ಆಗಮಿಸಿದರು. ವಿದ್ಯಾರ್ಥಿಗಳಿಗೆ ಜೊತೆ ಮಾತನಾಡಿ ಬಿ.ಸಿ.ಎ ವಿಭಾಗದಲ್ಲಿರುವ ಅವಕಾಶಗಳು ಹಾಗೂ ಹೊಸ ರೀತಿಯ ಪ್ರೋಗ್ರಾಮ್ ಗಳನ್ನು ನಡೆಸುವ ಕುರಿತು ವೈಯಕ್ತಿಕ ಸಾಧನೆಯನ್ನು ಸಾಧಿಸುವ ಕುರಿತಾಗಿ ಮತ್ತು ವಿಭಾಗದ ಪ್ರಾಮುಖ್ಯತೆಯ ಕುರಿತು ಶ್ರೀಮತಿ ಲಕ್ಷ್ಮೀ ಶೆಟ್ಟಿ ಮಾಹಿತಿ ನೀಡಿದರು.
ಈಶ್ವರ್ ಮಲ್ಪೆ ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಿಗುವ ಅವಕಾಶಕ್ಕೆ ಹೊಂದಿಕೊಂಡು ಉತ್ತಮವಾದಂತಹ ವಿದ್ಯೆಯನ್ನು ಪಡೆದು ಸಮಾಜಮುಖಿಯಾಗಿರುವಂತ ಕೆಲಸದಲ್ಲಿ ನಮ್ಮನ್ನು ತೊಡಗಿಸ ಕೊಳ್ಳಬೇಕೆಂದು ಸೂಕ್ತ ಮಾರ್ಗದರ್ಶನವನ್ನು ನೀಡಿದರು. ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ, ನಿರ್ದೇಶಕಿಯಾದ ಶ್ರೀಮತಿ ಮಮತಾ, ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತ ಬಿ.ಸಿ.ಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅನಿತಾ, ವಿಭಾಗದ ವಿದ್ಯಾರ್ಥಿ ನಾಯಕನಾದ ಜೀವನ್ ಖಾರ್ವಿ, ಉಪನಾಯಕಿ ಮಧುಶ್ರೀ , ಹಾಗೂ ಸಂಸ್ಥೆಯ ಎಲ್ಲಾ ಉಪನ್ಯಾಸಕರು, ಉಪನ್ಯಾಸಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಿಝಾ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೀರಕ್ಷಾ ವಂದಿಸಿ, ಅಂಕಿತಾ ಮತ್ತು ಸಾಹುಲ್ ಅತಿಥಿಗಳನ್ನು ಪರಿಚಯಿಸಿ ,ವಿದ್ಯಾರ್ಥಿನಿ ಜಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.