ಬಜ್ಪೆಯ ಸಮ್ಯತಾಳ ಕೈಚಳಕಕ್ಕೆ ಬೇಷ್ ಎಂದ ಸಂಸದ ಕೋಟ

ಬ್ರಹ್ಮಾವರ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 96.5 ಅಂಕ ಪಡೆದು ಶಿಕ್ಷಣದಲ್ಲಿ ಟೋಪರ್ ಆಗಿ ಚಿತ್ರ ರಚನೆ ಕಲೆಯಲ್ಲಿ ಸೂಪರ್ ಎನಿಸಿಕೊಂಡ ಬಜ್ಪೆಯ ಸಮ್ಯತ ಆಚಾರ್ಯ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಚಿತ್ರವನ್ನು ರಚಿಸಿ ಕಾರ್ಯಕ್ರಮವೊಂದರಲ್ಲಿ ನೀಡಿ ಬೇಷ್ ಎನಿಸಿಕೊಂಡಿದ್ದಾಳೆ.

ಕೋಟೇಶ್ವರದ ಕಾರ್ಯಕ್ರಮವೊಂದರಲ್ಲಿ ಪ್ರತಿಭಾಪುರಸ್ಕಾರಕ್ಕೆ ಬಂದ ಸಮ್ಯತ ಆಚಾರ್ಯ ಉದ್ಘಾಟಕರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪೆನ್ಸಿಲಿನಲ್ಲಿ ರಚಿಸಿದ ಅವರ ಭಾವಚಿತ್ರವನ್ನು ನೀಡಿದಾಗ ಸಂಸದರೆ ಆಶ್ಚರ್ಯ ಚಕಿತರಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೊಳಲಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಯಂತ್ ಆಚಾರ್ಯ, ಸಂತೋಷ್ಮಾರವರ ಪುತ್ರಿ ಸಮ್ಯತ ಈಗಾಗಲೆ ನಾಡಿನ ಖ್ಯಾತರಾದ ನಾ, ಸೋಮೇಶ್ವರ, ನಟ ಸುಧೀಪ್, ರಚಿತಾರಾಮ್, ಬಸವರಾಜ್ ಬೊಮ್ಮಾಯಿ,ಕ್ಯಾಪ್ಟನ್ ನವೀನ ನಾಗಪ್ಪ ಸೇರಿದಂತೆ ಅನೇಕ ಜನರ ವ್ಯಕ್ತಿಚಿತ್ರ ರಚಿಸಿ ವ್ಯಕ್ತಿಗಳಿಗೆ ನೀಡಿದ ಪ್ರತಿಭಾವಂತಳಾಗಿದ್ದಾಳೆ.

Related Posts

Leave a Reply

Your email address will not be published.