ಕನ್ಸರ್ವೇಟಿವ್ ಪಕ್ಷಕ್ಕೆ ಇತಿಹಾಸದಲ್ಲೇ ಕಡಿಮೆ ಸ್ಥಾನ ಬ್ರಿಟನ್ನಿನಲ್ಲಿ ಲೇಬರ್ ಪಕ್ಷ ಬಹುಮತದೊಡನೆ ಅಧಿಕಾರಕ್ಕೆ
ಬ್ರಿಟನ್ನಿನಲ್ಲಿ ಆಳುವ ಕನ್ಸರ್ವೇಟಿವ್ ಪಕ್ಷವು 14 ವರುಷಗಳ ಬಳಿಕ ಅಧಿಕಾರ ಕಳೆದುಕೊಂಡುದಲ್ಲದೆ ಇತಿಹಾಸದಲ್ಲೇ ಅತಿ ಕಡಿಮೆ ಸ್ಥಾನಗಳನ್ನು ಪಡೆಯಿತು.
ಲೇಬರ್ ಪಕ್ಷದ 61ರ ಕೀರ್ ಸ್ಟಾರ್ಮರ್ ಹೊಸ ಪ್ರಧಾನಿ. ಅವರು ಗೆಲುವಿನ ಬಳಿಕ ಕಿಂಗ್ ಚಾರ್ಲ್ಸ್ 3 ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿದರು.
ಲೇಬರ್ ಪಕ್ಷವು 412, ಕನ್ಸರ್ವೇಟಿವ್ ಪಕ್ಷ 121, ಲಿಬರಲ್ ಡೆಮೊಕ್ರಟಿಕ್ ಪಕ್ಷ 71, ಇತರ ಸಣ್ಣ ಪಕ್ಷಗಳು 33 ಮತ್ತು ಪಕ್ಷೇತರರು 11 ಮಂದಿ 650 ಬಲದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ರಿಷಿ ಸುನಕ್ ಸಹಿತ ಭಾರತೀಯ ಮೂಲದ 26 ಮಂದಿ ಗೆದ್ದಿದ್ದಾರೆ. ಗಾಜಾ ಪಟ್ಟಿ ಯುದ್ಧ ವಿರೋಧಿ ನಿಲುವಿನ ಹಲವರು ಗೆದ್ದಿದ್ದಾರೆ.