ಬ್ರಹ್ಮಾವರ: ಬಾರ್ಕೂರಿನಲ್ಲಿ ವನ ಮಹೋತ್ಸವ ಕಾರ್ಯಕ್ರಮ
ರೋಟರಿ ಕ್ಲಬ್ ಬಾರ್ಕೂರು ಆಶ್ರಯದಲ್ಲಿ ಬಾರ್ಕೂರು ಅಂಚೆ ಕಛೇರಿ ಬಳಿ ವನ ಮಹೋತ್ಸವ ಮತ್ತು850 ಉಚಿತ ಔಷಧಿ ಗಿಡ ಹಾಗೂ ಹಣ್ಣಿನ ಗಿಡ ವಿತರಣೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಬಾರಕೂರು ರೋಟರಿಯ ಗಣೇಶ್ ಶೆಟ್ಟಿ ಮಾತನಾಡಿ, ಮನು ಕುಲದ ಸೇವೆಯಲ್ಲಿ ಮೂಂಚೂಣಿಯಲ್ಲಿರುವ ರೋಟರಿ ಬಾರಕೂರು ಮುಂದಿನ ಮಾನವ ಜನಾಂಗ ಆರೋಗ್ಯದಿಂದ ಇರಲು ಮನುಷ್ಯನ ಉಸಿರಿಗೆ ಕಾರಣವಾಗುವ ಉತ್ತಮ ಗಿಡವನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಡಾ, ಬಿ.ಧನಂಜಯ್, ರೋಟರಿ ಮಾಜಿ ಸಹಾಯಕ ಗವರ್ನರ್ ಕೆ. ಪಿ ಕಾಂಚನ್ ,ರೋಟರಿ ಅಶೋಕ್ ಶೆಟ್ಟಿ, ರೋ ಅಜಿತ್ ಕುಮಾರ್ ಶೆಟ್ಟಿ, ಅರಣ್ಯಾಧಿಕಾರಿ ಹರೀಶ್ ಕೆ. ಪ್ರಗತಿಪರ ಕೃಷಿಕ ಮೋಹನ್ ಭಟ್ ಮತ್ತಿತರರು ಉಪಸ್ಥಿತರಿದ್ದರು.