ಬೈಂದೂರು: ಹೊಸಕಿರಣ ನ್ಯೂಸ್ ಚಾನೆಲ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವರಿಮಠ, ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ನೋಟ್ ಪುಸ್ತಕ ವಿತರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಲವರಿಮಠ ಬೈಂದೂರು ವಲಯ ಉಡುಪಿ ಜಿಲ್ಲೆ. ಇಂದು ಶಾಲೆಯಲ್ಲಿ ಹೊಸಕಿರಣ ನ್ಯೂಸ್ ಚಾನೆಲ್ ವತಿಯಿಂದ 21 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕೊಡುಗೆ ನೀಡಿದ ಹೊಸ ಕಿರಣ ನ್ಯೂಸ್ ಚಾನೆಲ್ ಸಂಪಾದಕರಾದ ಕಿರಣ್ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಸರಳವಾಗಿ ಉದ್ಘಾಟಿಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹಾಗು ಸಹಾಯ ಮನೋಭಾವದ ಕುರಿತು ಮಾತನಾಡಿದರು. SDMC ಅಧ್ಯಕ್ಷರು ಆದ ಗಣೇಶ್ ನಾಯ್ಕ್ ಕೊಡುಗೆಯ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದರು.ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು.ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಯಿತು. ಬಾರ್ಕುರ್ ಪಂಚಾಯತ್ ಸದಸ್ಯರಾದ ಪ್ರವೀಣ್ ಮರಕಾಲ ಮತ್ತು ದೀಪಕ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.