ಬೈಂದೂರು: ಫ್ರೆಂಡ್ಸ್ ಕ್ಲಬ್ ಕಿರೀಮಂಜೇಶ್ವರ ವತಿಯಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ
ಫ್ರೆಂಡ್ಸ್ ಕ್ಲಬ್ ಕಿರೀಮಂಜೇಶ್ವರ ವತಿಯಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ನಡೆಯಿತು.
ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು ಹಾಗೂ ಅಂಕಣದ ಉದ್ಘಾಟನೆಯನ್ನು ಮಾಜಿ ಶಾಸಕರಾದ ಶ್ರೀಗೋಪಾಲ ಪೂಜಾರಿಯವರು ಉದ್ಗಾಟಿಸಿದರು. ಸಭೆಯ ಅಧ್ಯಕ್ಷತೆ ಯನ್ನು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಉಮೇಶ್ ನಾಯರಿ ವಹಿಸಿದರು.
ಮುಖ್ಯ ಅತಿಥಿಗಳಾಗಿ ಎನ್ ವಿ ಪ್ರಕಾಶ್ ಐತಾಳ್ ಶೇಖರ್ ಖಾರ್ವಿ ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜೇಶ್ ನಾಯರಿ ಹೊಸತೋಟದ ಮನೆ ಸುರೇಶ್ ಶೆಟ್ಟಿ ಉಪ್ಪುಂದ ಶೇಖರ್ ಪೂಜಾರಿ ಉಪ್ಪುಂದ ಶ್ಯಾಮ ಸುಂದರ್ ನಾಯರಿ ವಕೀಲರು ಡಾ ಗಣೇಶ್ ಸಾಲಿಗ್ರಾಮ ಪ್ರಭಾಕರ್ ನಾಯರಿ ಅಧ್ಯಕ್ಷರು ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘ ( ರಿ).ಇರ್ಷಾದ್ ಕಿರಿಮಂಜೇಶ್ವರ ಮಹೇಂದ್ರ ಪೂಜಾರಿ ಸುಭಾಷ್ ಚಂದ್ರ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು ಚಂದ್ರ ಶೆಟ್ಟಿ ನಂದಿ ಹಾರ್ಡ್ವೇರ್ ವಡ್ಡರ್ಸೆ ಸಾರಥ್ಯ ದ ತಂಡ ಪ್ರಥಮ ಹಾಗೂ ನೂರಿ ಪಾಪ್ಯುಲರ್ ಕಿರಿಮಂಜೇಶ್ವರ ಸಾರಥ್ಯದ ದ್ವಿತೀಯ ಬಹುಮಾನ ಪಡೆದುಕೊಂಡಿತು.…