ಬೈಂದೂರು ಉತ್ಸವ ಪೂರ್ವ ಭಾವಿ ಸಭೆ

ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಸ್ಥಳೀಯ ಸಂಸ್ಕೃತಿ, ಆಚಾರ, ವಿಚಾರಳನ್ನು ಬಿಂಬಿಸುವ ಹಾಗೂ ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಮತ್ತು ಜಾಗತಿ ಮಟ್ಟದಲ್ಲಿ ಗುರತಿಸುವ ಮೂಲಕ ಜಾಗತಿಕ ಹೂಡಿಕೆದಾರರನ್ನು ಸೆಳೆದು ಹೆಚ್ಚೆಚ್ಚು ಉದ್ಯೋಗ ಸೃಷ್ಟಿಗೆ ಪೂರಕವಾಗುವಂತೆ ಜನರಿಗೆ ಬೈಂದೂರು ಕ್ಷೇತ್ರದ ಬಗ್ಗೆ ಹೊಸ ಚಿಂತನೆಯನ್ನು ಸೃಷ್ಟಿಸುವ ಸಲುವಾಗಿ ಬೈಂದೂರು ಉತ್ಸವ ಆಚರಿಸಲು ಚಿಂತಿಸಲಾಗಿದೆ ಎಂದು ಶಾಸಕ ಗುರುರಾಜ್ ಗಟಿಹೊಳೆ ಹೇಳಿದರು.


ಅವರು ಉಪ್ಪುಂದ ಶಾಸಕರ ಕಚೇರಿ ಕಾರ್ಯಕರ್ತ ದಲ್ಲಿ ಬೈಂದೂರು ಉತ್ಸವ ಕುರಿತು ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ನ.1 ರಿಂದ 3ರಂದು ಮೂರು ದಿನಗಳ ಕಾಲ ಬೃಹತ್ ಮಟ್ಟದಲ್ಲಿ ಬೈಂದೂರು ಉತ್ಸವ ಆಯೋಜಿಸಲು ಚಿಂತನೆ ನಡೆಸಿದ್ದೇವೆ. ಬೈಂದೂರಿನ ಪ್ರತಿಯೊಂದು ಗ್ರಾಮದ ವಿಶೇಷತೆ ಬಿಂಬಿಸುವ ವಿಶಿಷ್ಟ ಶೈಲಿಯ ಪುರ ಮೆರವಣಿಯ ಮೂಲಕ ಅದ್ಧೂರಿಯಾಗಿ ಚಾಲನೆ ನೀಡುವ ಕುರಿತು ಮಾಹಿತಿ ನೀಡಿದರು.


ಬೈಂದೂರು ಉತ್ಸವ ಕೇವಲ ಉತ್ಸವ ಆಗಿರದೇ ಮಾಹಿತಿ ಆಗರವೂ ಆಗಿರಲಿದೆ. ಇಲ್ಲಿ ಕ್ಷೇತ್ರದ ವಿಶೇಷತೆ, ಗ್ರಾಮೀಣ ಸೊಗಡು, ಆಹಾರೋತ್ಪನ್ನಕ್ಕೆ ಪೂರಕವಾಗಿ ವಿವಿಧ ಮಳಿಗೆಗಳು, ಕಲಾ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಎಲ್ಲವೂ ಇರಲಿದೆ.
ಸಮೃದ್ಧ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಪ್ರಾಸ್ತಾವಿಸಿ, ಬೈಂದೂರು ಕ್ಷೇತ್ರದಲ್ಲಿ ಪ್ರವಾಸೋದ್ಯಮ, ಕೈಗಾರಿಕೆ ಸೇರಿದಂತೆ ಇತರೆ ಉದ್ಯಮಗಳನ್ನು ನಡೆಸಲು ಅವಕಾಶಗಳು ಇದೆ. ಇದಕ್ಕೆ ಸೂಕ್ತ ತಳಪಾಯ ಹಾಕುವ ಅವಶ್ಯಕತೆ ಇದೆ. ಬೈಂದೂರು ಉತ್ಸವದ ಮೂಲಕ ವಿವಿಧ ಉದ್ಯಮಗಳನ್ನು ಸೆಳೆಯುವ ಉದ್ದೇಶ ಹೊಂದಿದೆ ಇದರಿಂದ ನಮ್ಮ ಕ್ಷೇತ್ರದ ಜನರಿಗೆ ಉದ್ಯೋಗ ಸೃಷ್ಠಿಯ ಜೊತೆಗೆ ಅಭಿವೃದ್ಧಿಯ ಗುರಿ ಹೊಂದಲು ಅವಕಾಶಗಳು ತರೆದುಕೊಳ್ಳುತ್ತದೆ ಎಂದರು.
ಭಾಗವಹಿಸಿದ ಪ್ರಮುಖರು ಬೈಂದೂರು ಉತ್ಸವ ವಿಶೇಷತೆಯಿಂದ ಕೈಗೊಂಡಿರಬೇಕು, ಜನ ಮನ್ನಣೆಗಳಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿ, ವಿವಿಧ ಸಲಹೆಗಳನ್ನು ನೀಡಿದರು. ಶ್ರೀಗಣೇಶ ಸ್ವಾಗತಿಸಿ, ನಿರ್ವಹಿಸಿದರು.

add - Haeir

Related Posts

Leave a Reply

Your email address will not be published.