ಬೈಂದೂರು:; ತ್ರಾಸಿ ಬೀಚಿನಲ್ಲಿ ವಾಟರ್ ಸ್ಪೋರ್ಟ್ಸ್ ಜಸ್ಕಿ ರೈಡರ್ ಸಮುದ್ರದಲ್ಲಿ ನಾಪತ್ತೆ!
ಬೈಂದೂರು: ಬೇಲುಗ ವಾಟರ್ ಸ್ಪೋರ್ಟ್ಸ್ ಜಸ್ಕಿ ರೈಡರ್ ಶನಿವಾರ ಸಂಜೆಯ ವೇಳೆ ಪ್ರವಾಸಿಗರನ್ನು ಸಮುದ್ರದಲ್ಲಿ ರೈಡಿಗೆ ಕರೆದುಕೊಂಡು ಹೋದಾಗ ಅಬ್ಬರದ ಸಮುದ್ರದ ಅಲೆಗೆ ಜಸ್ಕಿ ಪಲ್ಟಿ ಪಡೆದ ಪರಿಣಾಮ ಜಸ್ಕಿ ರೈಡರ್ ರವಿ ಎಂಬ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಪ್ರಕರಣ ನಡೆದಿದೆ.
ಸಮುದ್ರದಲ್ಲಿ ಜಸ್ಕಿ ರೈಡಿಗೆ ಹೋದ ಪ್ರವಾಸಿಗ ಪ್ರಾಣಅಪಾಯದಿಂದ ಪಾರಾಗಿ ಬಂದಿದ್ದಾರೆ,
ಸ್ಥಳಕ್ಕೆ ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೊಲೀಸ್, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ ಹಾಗೂ ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯ ಬೇಕಾಗಿದೆ.