ಭಾರೀ ಮಳೆಗೆ ಕುಸಿದ ಮೋರಿ : ಹೊಳೆಯ ಪಾಲಾದ ರಸ್ತೆ

ಬೈಂದೂರು ವಿಧಾನಸಭಾ ಕ್ಷೇತ್ರದ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೂರಕುಂದ ಸಮೀಪದ ಕಲ್ಮಕ್ಕಿಯಲ್ಲಿ ಕಳೆದ 2-3ದಿನಗಳಿಂದ ಸುರಿದ ಭಾರಿ ಮಳೆಗೆ ರಸ್ತೆಗೇ ಅಳವಡಿಸಿದ್ದ ಮೋರಿ ಕುಸಿದು ಸಂಪರ್ಕ ರಸ್ತೆ ಹೊಳೆಯ ಪಾಲಾಗಿದೆ.
ಹಲವಾರು ಮನೆಗೆ ಸಂಪರ್ಕವೇ ಇಲ್ಲದಂತಾಗಿದೆ. ಶಾಸಕರಾದ ಸುಕುಮಾರ ಶೆಟ್ಟಿ ಯವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಪಟ್ಟಣ ಪಂಚಾಯತ್ ಇಂಜಿನಿಯರ್ ಲ್ಲಿ ಎಸ್ಟಿಮೇಟ್ ಮಾಡಲು ಆದೇಶ ಮಾಡಿದರು.ತಕ್ಷಣಕ್ಕೆ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯತನ ಮುಖ್ಯಧಿಕಾರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಜೊತೆಯಲ್ಲಿ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರಾದ ಶ್ರೀಯುತ ಶಂಕರ್ ಪೂಜಾರಿ, ಸುಕುಮಾರ ಸುರ್ಕುಂದ ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಶ್ರೀಯುತ ಜೈಸನ್ ಮದ್ದೋಡಿ, ಸಮಾಜ ಸೇವಕರಾದ ಶ್ರೀಯುತ ಸುಬ್ರಮಣ್ಯ ಬಿಜೂರ್ ರಾಜೇಶ್ ಬಡಾಕೆರೆ ಉಪಸ್ಥಿತರಿದ್ದರು.