ಬೈಂದೂರು : ನಾಗೂರಿನಲ್ಲಿ ವಿನೂತನ ಕನ್ನಡ ಹಬ್ಬ
ಬೈಂದೂರು : ಕನ್ನಡ ರಾಜ್ಯೋತ್ಸವ 2024ರ ಪ್ರಯುಕ್ತ ನಾಗೂರಿನಲ್ಲಿ ವಿನೂತನ ಕನ್ನಡ ಹಬ್ಬ ಭಾನುವಾರು ನಾಗೂರು ಕೃಷ್ಣ ಲಲಿತಾ ಕಲಾಮಂದಿರದಲ್ಲಿ ನಡೆಯಿತು.
ಕಿರಿಮಂಜೇಶ್ವರ ಗ್ರಾ ಪಂ ಅಧ್ಯಕ್ಷ ಶೇಖರ ಖಾರ್ವಿ ಕನ್ನಡ ಹಬ್ಬ 2024ರ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿ, ನಮ್ಮ ಭಾಷೆ, ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಜ್ಞಾನವನ್ನು ಮೈಗೂಡಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ಬೆಳವಣಿಗೆ ಮಾಡಿಕೊಳ್ಳಬೇಕು. ಕನ್ನಡ ಭಾಷೆ ತನ್ನದೇ ಆದ ಇತಿಹಾಸ ಮತ್ತು ಶ್ರೇಷ್ಠತೆಯನ್ನು ಹೊಂದಿದೆ. ನಮ್ಮ ಪೂರ್ವಜರು ಅದ್ಭುತವಾದ ಸಾಹಿತ್ಯ ಸಂಪತ್ತು ಬಿಟ್ಟು ಹೋಗಿದ್ದಾರೆ. ಇಂದಿನ ಹೊಸ ತಲೆಮಾರಿನವರು ಅವುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಹೊಂಬಾಡಿ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ್ ಬಿಲ್ಲವ ಮಾತನಾಡಿ, ಕನ್ನಡ ರಾಜ್ಯೋತ್ಸವದ ಪರಿಕಲ್ಪನೆಯ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಗ್ರಾಮಗಳಲ್ಲಿ ನಡೆಯಬೇಕು. ಮುಂದಿನ ದಿನಗಳಲ್ಲಿ ಅನೇಕ ಕಾರ್ಯಕ್ರಮ ನಡೆಬೇಕು, ಇದರ ಆಯೋಜನ ರಾಘವೇಂದ್ರ ಇವರಿಗೆ ನಾನು ಸದಾ ಕೈಜೋಡಿಸುತ್ತೇನೆ ಎಂದರು.
ಕಾರ್ಯಕ್ರಮದ ಆಯೋಜಕರಾದ ರಾಘವೇಂದ್ರ ಅವರು ಮಾತನಾಡಿ ಊರಿನ ಅನೇಕರ ಸಹಕಾರದಿಂದ ಈ ಕಾರ್ಯಕ್ರಮ ಅದ್ಧೂರಿಯಾಗಿ ಜರಗಿದೆ ಎಂದರು.
ಈ ಸಂದರ್ಭದಲ್ಲಿ ನಾಗೂರು ಕೃಷ್ಣ ಲಲಿತಾ ಕಲಾಮಂದಿರದ ಮಾಲೀಕ ರತ್ನಾಕರ ಉಡುಪ, ಮೆಸ್ಕಾಂ ಅಧಿಕಾರಿ ಸುಧಾಕರ್, ಆದರ್ಶ ಶಿಕ್ಷಕ ಪುರಸ್ಕøತ ಮಂಜು ಎನ್ ಬಿಲ್ಲವ, ಉಡುಪಿ ನಗರ ಸಭೆಯ ಯೋಗೀಶ್ ಕಿರಿಮಂಜೇಶ್ವರ, ಕಾಂತಾರ ಚಲನಚಿತ್ರದ ಚಿರುನಟ ರಾಜೇಶ್ ಕೆರ್ಗಾಲ್, ಬೈಂದೂರು ತಾಲೂಕು ಶಿಕ್ಷಕರ ಸಂಘದ ಅಚ್ಚುತ್ತ ಬಿಲ್ಲವ, ನಾವುಂದ ಗ್ರಾ.ಪಂ ಸದಸ್ಯೆ ಸಿಂಗಾರಿ, ಉದ್ಯಮಿ ನಾಣು ಡಿ ಚಂದನ್, ಕಿರಿಮಂಜೇಶ್ವರ ಗ್ರಾ.ಪಂ ಮಾಜಿ ಸದಸ್ಯೆ ವಂದನಾ, ನಾಗೂರು ಉದ್ಯಮಿ ರಫೀಕ್ ಎಮ್.ಜಿ, ವಸಂತಿ, ಗಿರಿಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿನೂತನ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಲೈನ್ ಮ್ಯಾನ್, ಪೋಸ್ಟ್ ಮ್ಯಾನ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಮಖ್ಯೋಪಾಧ್ಯಾಯರು ಗೌರವದ ಸನ್ಮಾನಿಸಿ ಗೌರಿವಿಸಲಾಯಿತು.
ಕಾರ್ಯಕ್ರಮ ನಿರ್ದೇಶಕ ರಾಘವೇಂದ್ರ ನಾಗೂರು ಸ್ವಾಗತಿಸಿದರು, ಸಂಪನ್ಮೂಲ ವ್ಯಕ್ತಿಗಳಾದ ಬಲಗೋಣ ಸ.ಕಿ.ಪ್ರಾ ಶಾಲೆಯ ಶಿಕ್ಷಕ ಶೇಖರ್ ದೇವಾಡಿಗ ಬಿ, ಅಜ್ರಗದ್ದೆ ಸ.ಕಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ ದಿನೇಶ್ ಬಿ ಕಾರ್ಯಕ್ರಮ ನಿರೂಪಿಸಿದರು.