ಬೈಂದೂರು: ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ದುರ್ಮರಣ

ಬೈಂದೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಸೋಮವಾರ ಬೈಂದೂರಿನಲ್ಲಿ ನಡೆದಿದೆ. ಸೋಮವಾರ ಮದ್ಯಾಹ್ನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ. ಸಲೀಂ (38) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಮೂಲತಃ ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿಯಾಗಿದ್ದು ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ವಿವಾಹಿತರಾಗಿರುವ ಇವರು ಎರಡು ತಿಂಗಳ ಮಗು ಹೊಂದಿದ್ದಾರೆ. ಬೈಂದೂರು ಪರಿಸರದ ಜನಸ್ನೇಹಿ ಲೈನ್‌ಮ್ಯಾನ್ ಆಗಿರುವ ಇವರು ಅಕಾಲಿಕ ನಿಧನ ಅಘಾತ ಉಂಟು ಮಾಡಿದೆ. ವಿದ್ಯುತ್ ಶಾಕ್ ತಗುಲಿ ಕಳೆದ ವರ್ಷ ಶಿರೂರಿನ ಉದ್ಯಮಿಯೊಬ್ಬರು ಮೃತಪಟ್ಟರೆ ಮೇ ತಿಂಗಳಲ್ಲಿ ಶಿರೂರಿನ ಮೀನುಗಾರ ವ್ಯಕ್ತಿ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದರು. ಈ ವರ್ಷ ಬೈಂದೂರು ಮೆಸ್ಕಾಂ ಮಳೆಗಾಲ ಆರಂಭದಿಂದ ಅಪಾರ ನಷ್ಟ ಉಂಟಾಗುತ್ತಿದ್ದು ಲೈನ್‌ಮ್ಯಾನ್ ನಿಧನ ಅಪಾರ ನೋವು ತಂದಿದೆ.

govt women polytechnic

Related Posts

Leave a Reply

Your email address will not be published.