ಬೈಂದೂರು : ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಚೆಸ್ ಪಂದ್ಯಾಟ
ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೈಂದೂರು ಹಾಗೂ ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ
ಇವರ ಜಂಟಿ ಆಶ್ರಯದಲ್ಲಿ ಬೈಂದೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ
ಚೆಸ್ ಪಂದ್ಯಾಟ ಶ್ರೀ ನರಸಿಂಹ ದೇವಾಡಿಗ ಮತ್ತು ಶ್ರೀ ಶೇಖರ್ ಖಾರ್ವಿ ಚೆಸ್ ಆಟ ಆಡುದರ ಮೂಲಕ ಚಾಲನೆ ನೀಡಲಾಯಿತು.
ಶ್ರೀ ಶೇಖರ್ ಖಾರ್ವಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಿರಿಮಂಜೇಶ್ವರ ಮತ್ತು ಶ್ರೀ ನರಸಿಂಹ ದೇವಾಡಿಗ ಗ್ರಾಮ ಪಂಚಾಯತ್ ಅಧ್ಯಕ್ಷರು ನಾವುಂದ ದೀಪ ಬೆಳಗಿಸಿ ಕಾರ್ಯಕ್ರಮಕೆ ಚಾಲನೆ ನೀಡಿ ಶುಭ ಹಾರೈಸಿದರು.
ಶ್ರೀ ಗಣೇಶ ಮೋಗವೀರ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪ್ರಾಂಶುಪಾಲರು ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆಸ್ ಎಂಬುದು ಮಕ್ಕಳನ್ನು ಮಾನಸಿಕವಾಗಿ ಶಿಸ್ತು ಬದ್ಧವಾಗಿ ಮಾಡುವ ಕ್ರೀಡೆ, ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿಭೆಗಳನ್ನು ತೋರಿಸಿ ಮುಂದೆ ರಾಷ್ಟ್ರಮಟ್ಟದಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು
ಅರುಣ್ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿಗಳು ಬೈಂದೂರು ವಲಯ ಮಾತನಾಡಿ, ಕೇವಲ ದೈಹಿಕವಾದುದಲ್ಲ, ಮನೋಬಲ ಉಳ್ಳವರಲ್ಲಿ ಪ್ರಾಯೋಗಿಕ ಆಟವಾದ ಚದುರಂಗ ತಾಳ್ಮೆಯನ್ನು ಬಯಸುತ್ತದೆ. ಬದುಕಿಗೂ ತಾಳ್ಮೆ ಮುಖ್ಯ. ಹೀಗಾಗಿ ಈ ಆಟ ಶೈಕ್ಷಣಿಕ ಬದುಕಿಗೂ ಅತೀ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಪ್ರಭಾಕರ ಎಸ್ ಸಹಾಯಕ ನಿರ್ದೇಶಕರು ಯುವಜನ ಸೇವಾ ಕ್ರೀಡಾ ಇಲಾಖೆ, ಗುರುರಾಜ್ ಕಾರ್ಯದರ್ಶಿಗಳು, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೈಂದೂರು, ಬಾಬು ಪೂಜಾರಿ ಉಪಾಧ್ಯಕ್ಷರು ಚೆಸ್ ಅಸೋಸಿಯೇಷನ್ ಸಿದ್ದಿ ವಿನಾಯಕ ಚೆಸ್ ಅಕಾಡೆಮಿ ಸಂಚಾಲಕರು,ಉಮಾನಾಥ ಕಾಪು ಅಧ್ಯಕ್ಷರು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಉಪಸ್ಥಿದರಿದ್ದರು .
ಉಪನ್ಯಾಸರಾದ ರಾಷ್ಟ್ರಮಟ್ಟದ ನಿರುಪಕರಾದ ಉದಯ ಸರ್ ಕಾರ್ಯಕ್ರಮ ನಿರೂಪಿಸಿದರು.
ದೀಪಿಕಾ ಆಚಾರ್ಯ ಮುಖ್ಯ ಶಿಕ್ಷಕಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಸ್ವಾಗತಿಸಿದರು. ಶ್ರೀಮತಿ ಶಶಿಕಲಾ ಧನ್ಯವಾದ ಸಮರ್ಪಣೆ ಮಾಡಿದರು.