ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಕ್ಯಾ.ಬ್ರಿಜೇಶ್ ಚೌಟರಿಗೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ವತಿಯಿಂದ ಅಭಿನಂದನಾ ಕಾರ್ಯಕ್ರಮ

ದಕ್ಷಿಣ ಕನ್ನಡ ಮತ್ತು ಉಡುಪಿ, ಚಿಕ್ಕಮಗಳೂರು ಕ್ಷೇತ್ರಗಳ ನೂತನ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ವತಿಯಿಂದ ಮುಲ್ಕಿ ಬಿಲ್ಲವ ಮಹಾ ಮಂಡಲದ ಸಭಾಭವನದಲ್ಲಿ ಅಭಿನಂದಿಸಲಾಯಿತು.

ಅಭಿನಂದನಾ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿಯವರು, ಚುನಾವಣೆ ಸಂದರ್ಭ ಅಪಪ್ರಚಾರಗಳು ಸಾಮಾನ್ಯ. ಆದರೆ ಉಭಯ ಜಿಲ್ಲೆಗಳ ಮತದಾರರು ಜಾತಿ, ಧರ್ಮವನ್ನು ಮೀರಿ ನಮಗೆ ಸಹಕಾರ ನೀಡಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯಿಂದ ಇಂದಿನವರೆಗೂ ಜನ ನನ್ನನ್ನು ಬೆಂಬಲಿಸಿದ ಕಾರಣ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಯಿತು ಎಂದರು.
ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ನನಗೆ ಅನುಭವ ಕಡಿಮೆ ಪ್ರಥಮ ಬಾರಿಗೆ ಸಂಸದನಾಗಿ ಆಯ್ಕೆಯಾಗಿದ್ದೇನೆ, ಕೋಟ ಶ್ರೀನಿವಾಸ್ ಪೂಜಾರಿಯವರ ಜೊತೆ ಜೊತೆಗೆ ಕೆಲಸ ಮಾಡುತ್ತೇನೆ ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕೆಂದು ಈ ಹಿಂದಿನಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ ಹಾಗೂ ಅದರ ಬಗ್ಗೆ ಗಮನ ಹರಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ.ರಾಜಶೇಖರ್ ಕೋಟ್ಯಾನ್ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹರೀಶ್ ಡಿ ಸಾಲ್ಯಾನ್ ಬಜಗೋಳಿ, ಪ್ರಧಾನ ಕಾರ್ಯದರ್ಶಿ ಬಾಲ ಗಂಗಾಧರ ಪೂಜಾರಿ ಚೇಳಾಯರು, ಕೋಶಾಧಿಕಾರಿ ಕೆ ಪ್ರಭಾಕರ ಬಂಗೇರ, ಕಾರ್ಕಳ ಜತೆ ಕಾರ್ಯದರ್ಶಿಗಳಾದ ಶಿವಾಜಿ ಸುವರ್ಣ ಬೆಳ್ಳೆ,ರಾಜಶೇಖರ್ ಕೋಟ್ಯಾನ್ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಡಿ ಸಾಲ್ಯಾನ್ ಬಜಗೋಳಿ, ಪ್ರಧಾನ ಕಾರ್ಯದರ್ಶಿ ಬಾಲ ಗಂಗಾಧರ ಪೂಜಾರಿ ಚೇಳಾಯರು, ಕೋಶಾಧಿಕಾರಿ ಕೆ ಪ್ರಭಾಕರ ಬಂಗೇರ, ಕಾರ್ಕಳ ಜತೆ ಕಾರ್ಯದರ್ಶಿಗಳಾದ ಶಿವಾಜಿ ಸುವರ್ಣ ಬೆಳ್ಳೆ,ಗಣೇಶ್ ಪೂಜಾರಿ ಮೂಡುಪೆರಾರ, ಜತೆ ಕಾರ್ಯದರ್ಶಿ ಗಣೇಶ್ ಎಲ್ ಪೂಜಾರಿ ಬೈಂದೂರು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.