ಬೈಂದೂರು: ಸುತ್ತಲೂ ಹೊಳೆಯಿಂದ ಆವೃತವಾದ ನಾವುಂದದ ಕುದ್ರು
ಬೈಂದೂರು: ವೈಶಾಖದಲ್ಲಿ ನದಿಯಾಚೆಗಿನ ಮನೆಗೆ ತೆರಳಲು ದೋಣಿಯಲ್ಲಾದರೂ ಪ್ರಯಾಣಿಸ ಬಹುದಿತ್ತು. ಆದರೆ ಈಗ ಮಳೆಯಬ್ಬರ ಜೋರಿದೆ ಸೌಪರ್ಣಿಕ ನದಿಯಲ್ಲಿ ನೀರಿನ ಮಟ್ಟವು ಹೆಚ್ಚಿದೆ. ಕುದ್ರುವಿನಿಂದ ನಾವುಂದಕ್ಕೆ ಅಥವಾ ನಾವುಂದದಿಂದ ಕುದ್ರುವಿಗೆ ಹೋಗುವುದಾದರೂ ಹೇಗೆ ಎಂಬುದೇ ಯಕ್ಷಪ್ರಶ್ನೆ.
ಬೇಸಗೆಯಿರಲಿ ಅಥವಾ ಮಳೆಗಾಲವಿರಲಿ ಅನೇಕ ವರ್ಷಗಳಿಂದ ಈ ಕುದ್ರುವಿನ ನಿವಾಸಿಗಳಿಗೆ ದೋಣಿಯೊಂದೇ ಆಧಾರ.
ನಾವುಂದ ಕುದ್ರುವಿನಲ್ಲಿ 7 ಮನೆಗಳಿದ್ದು, ಒಟ್ಟು ಸುಮಾರು 20 ಮಂದಿ ನೆಲೆಸಿದ್ದಾರೆ. ಪ್ರತಿ ಮನೆಗಳಿಗೂ ಅಂದಾಜು ಎರಡೆರಡು ಎಕರೆಯಷ್ಟು ಜಾಗವಿದ್ದು, ಅದರಲ್ಲಿ ಸ್ವಲ್ಪ ಅಡಿಕೆ ತೋಟಗಳಿವೆ.ಅದು ಬಿಟ್ಟರೆ ಕುದ್ರುವಿನ ಈಚೆ ದಡಕ್ಕೆ ಬಂದು ಕೆಲಸ ಮಾಡಿದರೆ ಮಾತ್ರ ಜೀವನಾಧಾರಕ್ಕೆ ಏನಾದರೂ ಸಿಗುತ್ತದೆ.
ನಾವುಂದ ಗ್ರಾ.ಪಂ. ಒಂದು ದೋಣಿ ನೀಡಿತ್ತು. ಅದರಲ್ಲಿ ಪ್ರಯಾಣಿಸಿದವರು. ಆದರೆ ಈಗ ಪ್ರತಿ ಮನೆಗೊಂದು ದೋಣಿ ಇರುವುದರಿಂದ ಆ ಒಂದು ಚಿಂತೆ ಇಲ್ಲ ಇವರಿಗೆ ನಾನು ಚಿಕ್ಕಂದಿನಿಂದ ಇದೇ ಕುದ್ರುವಿನಲ್ಲಿ ನೆಲೆಸಿದ್ದು, ಮೊದಲು ಕುದ್ರು ದೊಡ್ಡದಿತ್ತು ನಂತರ ಪ್ರತಿ ನೆರೆಗೆ ಕೂಡ ಮುಂಭಾಗದಲ್ಲಿರುವ ಮಣ್ಣು ನದಿಗೆ ಕೊಚ್ಚಿ ಹೋಗುತ್ತಿತ್ತು ಇದೀಗ ಸಂಪೂರ್ಣ ಕೊಚ್ಚಿಹೋಗಿದೆ ಇನ್ನು ಕೆಲವು ವರ್ಷಗಳ ನಂತರ ಸಂಪೂರ್ಣ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿದೆ. ಸಂಬಂಧಪಟ್ಟ ಅಧಿಕಾರಿಗಳು ಕುದ್ರುವಿನ ಮುಂಭಾಗಕ್ಕೆ ತಡೆಗೋಡೆ ಹಾಕಿದರೆ ಮಣ್ಣು ಕೊಚ್ಚಿ ಹೋಗುವುದನ್ನು ತಡೆಗಟ್ಟಬಹುದೆಂದು ಹೇಳಿದರು ಮತ್ತು ಸೇತುವೆಯಿಲ್ಲ. ತೂಗು ಸೇತುವೆಯೂ ಇಲ್ಲ. ಚುನಾವಣೆ ಬಂದಾಗೊಮ್ಮೆ ಎಲ್ಲರೂ ಹೇಳುತ್ತಾರೆ ಈ ಸಲ ಮಾಡಿಕೊಡುವ ಅಂತಾ. ಆದರೆ ಆ ಬಳಿಕ ಮರೆತೇ ಬಿಡುತ್ತಾರೆ. ದೋಣಿಯೇ ನಮಗೆ ಆಶ್ರಯವಾಗಿದೆ. ಈ ಸಲವಾದರೂ ಸೇತುವೆಯಲ್ಲದಿದ್ದರೂ, ತೂಗು ಸೇತುವೆಯನ್ನಾದರೂ ಮಾಡಿಕೊಡಲಿ ಎಂದು ಸ್ಥಳೀಯ ನಿವಾಸಿ ಸಂತೋಷ್ ಪೂಜಾರಿ ತಮ್ಮ ಅಳಲನ್ನು ಹಂಚಿಕೊಂಡರು.
ನೆರೆ ಬಂದಾಗ ಇವರ ಗೋಳು ಕೇಳುವರೇ ಇಲ್ಲ ರಾತ್ರೋರಾತ್ರಿ ನೀರಿನ ಮಟ್ಟ ಹೆಚ್ಚಾಗುತ್ತದೆ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ ನೆರೆಯಿಂದ ಹೆಬ್ಬಾವು ಮತ್ತು ವಿಷಕಾರಿ ಹಾವುಗಳು ನೆರೆಯಲಿ ತೇಲಿ ಬರುತ್ತವೆ ಅದೆಷ್ಟು ಹಾವುಗಳು ಕುದ್ರುನಲ್ಲಿ ಆಶ್ರಯ ಪಡುತ್ತದೆ ಮಳೆಗಾಲ ಕಳೆಯುವುದೇ ಒಂದು ಸಾಹಸ ಎಂದು ಸ್ಥಳೀಯರ ನಿವಾಸಿಗಳ ಮಾತು.
ನೆರೆಪೀಡಿತ ಪ್ರದೇಶಗಳಾದ ಬಡಾಕೆರೆ, ಹಡವು, ಪಡುಕೋಣೆ,ನಾವುಂದ,ಚಿಕ್ಕಳ್ಳಿ, ಮರವಂತೆ, ಅರೆಹೊಳೆ, ಮುಂತಾದ ಪ್ರದೇಶಗಳಲ್ಲಿ
ನೆರೆಯಿಂದ ಸಾವಿರಾರು ಎಕರೆ ಬತ್ತದ ಕೃಷಿ ತೆಂಗಿನ ಕೃಷಿ ಅಡಿಕೆ ಬಾಳೆ ಸಂಪೂರ್ಣ ಜಲಾವೃತವಾಗಿದೆ.
ಆಹಾರವನ್ನು ತರಲು ದೋಣಿ ಆಧಾರ ಇವರಿಗೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿ ಕೇಳಿಕೊಂಡರು.